ಬೀರಲಿಂಗೇಶ್ವರ ದೇವಸ್ಥಾನಕ್ಕೆ ಮುಖಂಡ ಯಡಿಯಾಪುರ ಭೇಟಿ
ತಾಳಿಕೋಟಿ 24 : ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಗೊಟಖಂಡಕಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ ಯಡಿಯಾಪುರ ಅವರು ಗುರುವಾರ ಭೇಟಿ ನೀಡಿ ಬೀರಲಿಂಗೇಶ್ವರ ಹಾಗೂ ದೇವಸ್ಥಾನ ಪಕ್ಕದಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಯ ದರ್ಶನವನ್ನು ಮಾಡಿ ಆಶೀರ್ವಾದ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಬೀರಲಿಂಗೇಶ್ವರ ಸಮಾಜದ ಪೂಜಾರಿ ಬಾಂಧವರು ನನಗೆ ದೇವಸ್ಥಾನಕ್ಕೆ ಆಮಂತ್ರಿಸಿದ ಹಿನ್ನೆಲೆಯಲ್ಲಿ ಇಲ್ಲಿ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ ಅವರ ಸಮಾಜದೊಂದಿಗೆ ನಾನು ಸದಾ ಇರುತ್ತೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬಸನಗೌಡ ಎಡೆಯಾಪೂರ ಇವರನ್ನು ಪೂಜಾರಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಮಯದಲ್ಲಿ ಗಣ್ಯರಾದ ಈರಣ್ಣ ಮುತ್ಯಾ ಪೂಜಾರಿ, ದೇವಣ್ಣ ಹೂಗಾರ, ಶ್ರೀಕಾಂತ್ ಚೌಧರಿ, ಮಡಿವಾಳಪ್ಪಗೌಡ ಬಿರಾದಾರ, ಹೊನ್ನಣ್ಣ ಕವಡಿಮಟ್ಟಿ, ಜಟ್ಟೆಪ್ಪ ಕವಡಿಮಟ್ಟಿ, ಶಿವಪ್ಪ ಚೌದ್ರಿ, ಶ್ರೀಶೈಲ್ ಚೌದ್ರಿ, ಸಿದ್ದಣ್ಣ ಕುಂಟೋಜಿ ಹಾಗೂ ಸಮಾಜ ಬಾಂಧವರು ಇದ್ದರು.