ಕಳ್ಳಿಗುದ್ದಿ: ಅಧ್ಯಕ್ಷರಾಗಿ ಲಕ್ಷ್ಮಣ, ಉಪಾಧ್ಯಕ್ಷೆಯಾಗಿ ಶೋಭಾ ಆಯ್ಕೆ
ಮೂಡಲಗಿ 04: ಕಳ್ಳಿಗುದ್ದಿ ಗ್ರಾಮ ಪಂಚಾಯತನ ಅಧ್ಯಕ್ಷರಾಗಿ ಲಕ್ಷ್ಮಣ ಚನ್ನಾಳ ಉಪಾಧ್ಯಕ್ಷರಾಗಿ ಶೋಭಾ ಮೆಟ್ಟಿನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗೋಕಾಕ ಜಿಆರ್‍ಬಿಸಿ ಎಇಇ ಶ್ರೀನಿವಾಸ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
14 ಜನ ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯಿತಿ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದ ಮೇರೆಗೆ, ಗ್ರಾಮಗಳ ಮುಖಂಡರುಗಳ ಉಪಸ್ಥಿತಿಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.
ಮುಖಂಡರಾದ ರಾಮಣ್ಣ ಮಹಾರಡ್ಡಿ, ಬಿ.ಎಸ್ ಅಳಗೋಡಿ, ಎನ್.ಎಸ್.ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಎಲ್ ಆರ್ ಸಂಕ್ರಿ, ಎಸ್.ಎ ಕಮಲದಿನ್ನಿ, ಡಿ.ಡಿ ದೇಸಾಯಿ, ಆರ್.ಎಸ್ ಗುತ್ತಿಗೂಳಿ, ಜಿ.ಡಿ ಹರಿಜನ, ಪುಂಡಲೀಕ ದಳವಾಯಿ, ಮಾರುತಿ ದಳವಾಯಿ, ಹನಮಂತ ಮಾವಿನಗಿಡದ, ಮಲ್ಲಯ್ಯ ಹಿರೇಮಠ, ರಾಮಚಂದ್ರ ತೋಟಗಿ, ಶಿವಾನಂದ ಬಡಿಗೇರ, ಭರಮಣ್ಣ ಪಾಶ್ಚಾಪೂರ ಹಾಗೂ ಗ್ರಾಮ ಪಂಚಾಯತ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.