ಬಿಜೆಪಿ ಓಬಿಸಿ ಮೋರ್ಚಾ ಓಡಿಸ್ಸಾ ರಾಜ್ಯದ ಸಹ ಪ್ರಭಾರಿಯಾಗಿ ಲಕ್ಷ್ಮಣ ತಪಶಿ ನೇಮಕ
ಗೋಕಾಕ 15: ಭಾರತೀಯ ಜನತಾ ಪಾರ್ಟಿ ಓ.ಬಿ.ಸಿ. ಮೋರ್ಚಾದಲ್ಲಿ ಓಡಿಸ್ಸಾ ರಾಜ್ಯಕ್ಕೆ ಸಹ ಪ್ರಭಾರಿಯಾಗಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಬೆಳಗಾವಿ ಜಿಲ್ಲೆಯ ಗೋಕಾಕದ ವಕೀಲರಾದ ಲಕ್ಷ್ಮಣ ತಪಸಿ ಅವರು ಆಯ್ಕೆಯಾಗಿದ್ದಾರೆ.
ಸಂತೋಷ. ಬಿ. ಎಲ್. ರವರ ಸೂಚನೆಯ ಮೇರೆಗೆ ನೇಮಕಾತಿ ಮಾಡಲಾಗಿದೆ ಎಂದು ಓ.ಬಿ.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ. ಕೆ. ಲಕ್ಷ್ಮಣ ಅವರು ತಿಳಿಸಿದ್ದಾರೆ.
ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಲು ಈ ತಕ್ಷಣ ತಮಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಪಾರ್ಟಿಯ ಅಧ್ಯಕ್ಷ ಜೆ. ಪಿ. ನಡ್ಡಾಜಿಯವರ ನೇತೃತ್ವದಲ್ಲಿ ಪಕ್ಷದ ಅಭಿವೃದ್ಧಿ ಹಾಗೂ ರಾಷ್ಟ್ರದ ಸೇವೆಗಾಗಿ ಶ್ರಮಿಸೋಣ ಎಂದು ಲಕ್ಷ್ಮಣ. ತಪಶಿ ಅವರನ್ನು ಹಾರೈಸಿದ್ದಾರೆ.