ಮುಂದಗೋಡ

ವಕೀಲರ ದಿನಾಚರಣೆ

ವಕೀಲರ ದಿನಾಚರಣೆ

ಮುಂಡಗೋಡ: ಪಟ್ಟಣದ ಜೆ.ಎಮ್‌.ಎಫ್‌.ಸಿ. ನ್ಯಾಯಾಲಯದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಶನಿವಾರ ವಕೀಲರ ದಿನಾಚರಣೆ ಆಚರಿಸಲಾಯಿತು.   ನ್ಯಾಯಾಧೀಶ ಕೇಶವ ಕೆ. ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಹಮ್ಮದ್‌ಸಲೀಮ್ ನಂದಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಎಸ್‌.ಪಿ.ಸಮ್ಮಸಗಿ, ಸಿ.ಎಸ್‌.ಗಾಣಿಗೇರ, ಕೆ.ಎನ್‌.ಹೆಗಡೆ, ಎಮ್‌.ಎಸ್‌.ಬಿಜಾಪುರ, ಸುಜೀತ್ ಸದಾನಂದ, ಬಿ.ಎಫ್‌.ಪೂಜಾರ, ಅಜ್ಜಯ್ಯ ಶಿವಜೋಗಿಮಠ, ರಮೇಶ ಮಳೇಕರ, ರಾಜಶೇಖರ ಹುಬ್ಬಳ್ಳಿ, ಪ್ರಮೋದ ಸಣ್ಣಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ವಿಶ್ವನಾಥ ಪವಾಡಶೆಟ್ಟರ ಸ್ವಾಗತಿಸಿದರು. ರಾಘವೇಂದ್ರ ಮಳಗಿಕರ ನಿರೂಪಿಸಿದರು. ನಂದೀಶ ನಿಂಬಾಯಿ ವಂದಿಸಿದರು.      



ಸುದ್ದಿ ಓದಿ