ಬಳ್ಳಾರಿ

ಬಳ್ಳಾರಿ ಜಿ.ಪಂ.ನಿಂದ ಜನಜಾಗೃತಿ ಸ್ವಚ್ಛತಾ ರಥಕ್ಕೆ ಚಾಲನೆ

ಬಳ್ಳಾರಿ ಜಿ.ಪಂ.ನಿಂದ ಜನಜಾಗೃತಿ ಸ್ವಚ್ಛತಾ ರಥಕ್ಕೆ ಚಾಲನೆ

ಬಳ್ಳಾರಿ 27: ದೇಶವು ಸ್ವಾತಂತ್ರ-್ಯ ಗಳಿಸಿದ 75ನೇ ವರ್ಷದ ಸವಿನೆನಪಿನಲ್ಲಿ ಹಮ್ಮಿಕೊಂಡಿರುವ “ಆಜಾದಿ ಕಾ ಅಮೃತ್ ಮಹೋತ್ಸವ' ಅಭಿಯಾನದ ಪ್ರಯುಕ್ತ ಬಳ್ಳಾರಿ ಜಿಲ್ಲಾ ಪಂಚಾಯಿತಿಯು ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ಆಯೋಜಿಸಿರುವ “ಸತ್ಯಾಗ್ರಹದಿಂದ ಸ್ವಚ್ಛಾಗ್ರಹದೆಡೆಗೆ'' ಎಂಬ ಜನಜಾಗೃತಿಯ ಸ್ವಚ್ಛತಾ ರಥಕ್ಕೆ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರಾದ ಡಿ.ಜಾನಕಿರಾಮ್ ಅವರು ಬಳ್ಳಾರಿ ತಾಪಂ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಯೋಜನಾ ನಿರ್ದೇಶಕ ಡಿ.ಜಾನಕಿರಾಮ್ ಅವರು ಪ್ರತಿ ತಾಲ್ಲೂಕಿಗೆ ಒಂದರಂತೆ ರಥಯಾತ್ರೆ ಹಮ್ಮಿಕೊಂಡಿದ್ದೇವೆ. ಜನ ಜಾಗೃತಿಯ ಈ ಸ್ವಚ್ಛತಾ ರಥ ಎಲ್ಲ ಗ್ರಾಮ ಪಂಚಾಯಿತಿಗಳ ಪ್ರತಿಯೊಂದು ಗ್ರಾಮಗಳಲ್ಲಿ ಸಂಚರಿಸಲಿವೆ. ಜನರು ಈ ರಥದ ಬ್ಯಾನರ್ ಗಳಲ್ಲಿ ಬಿತ್ತಿರಿಸಿರುವ ಪಠ್ಯ ಮಾಹಿತಿಯನ್ನು ಓದಿ, ಚಿತ್ರ ಮಾಹಿತಿಯನ್ನು ನೋಡಿ ವಿಷಯಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದರು. 

‘ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪ್ರತಿ ಊರನ್ನು ಸ್ವಚ್ಛ ಸುಂದರವಾಗಿ ಮಾಡಲು ಗ್ರಾಮೀಣ ಸಮುದಾಯ ಸಕ್ರಿಯವಾಗಿ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.  

ಈ ಜಾಗೃತಿ ಅಭಿಯಾನಕ್ಕಾಗಿ ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಕಸ ವಿಲೇವಾರಿ ವಾಹನಗಳನ್ನೆ(ಸ್ವಚ್ಛತಾ ವಾಹಿನಿ) “ಜನ ಜಾಗೃತಿ ರಥ'ವಾಗಿ ಮಾರಿ​‍್ಡಸಲಾಗಿದೆ. ಇದರಲ್ಲಿ ಸ್ವಚ್ಛ ಭಾರತ ಮಿಷನ್(ಎಸ್‌.ಬಿ.ಎಂ.) ಯೋಜನೆಯ ವಸ್ತುವಿಷಯಗಳನ್ನು ಬಿತ್ತರಿಸಲಾಗಿದೆ. ವೈಯಕ್ತಿಕ ಶೌಚಾಲಯ ಬಳಕೆ, ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿ, ದ್ರವ ತ್ಯಾಜ್ಯದ ಸಮರ​‍್ಕ ನಿರ್ವಹಣೆ, ಋತುಚಕ್ರ ನೈರ್ಮಲ್ಯ, ಮಲ ಹೊರುವ ಪದ್ಧತಿ ನಿಷೇಧ(ಮ್ಯಾನುವಲ್ ಸ್ಕಾವೆಂಜಿಂಗ್) ಹಾಗೂ ಗ್ರಾಮೀಣ ಪ್ರದೇಶದಲ್ಲಿನ ನೀರು, ನೈರ್ಮಲ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುವ ಸಹಾಯವಾಣಿ ಸಂಖ್ಯೆ (9480985555)ಯನ್ನು ಪ್ರದರ್ಶಿಸಲಾಗಿದೆ.  

ಈ ಸಂದರ್ಭದಲ್ಲಿ ಜಿಪಂ ಮತ್ತು ತಾಪಂ ಅಧಿಕಾರಿಗಳು ಉಪಸ್ಥಿತರಿದ್ದರು. 

--- 


ಸುದ್ದಿ ಓದಿ