ಅಕ್ಟೋಬರ್ 23ರಂದು ಕಿತ್ತೂರ ರಾಣಿ ಚನ್ನಮ್ಮನ ಮೂರ್ತಿ ಲೋಕಾರ್ಪಣೆ
ಶಿಗ್ಗಾವಿ 24: ಕಿತ್ತೂರ ರಾಣಿ ಚನ್ನಮ್ಮನ ಮೂರ್ತಿ ಸಿದ್ದವಾಗಿದ್ದು, ಅಕ್ಟೋಬರ್ 23 ರಂದು ಲೋಕಾರ್ಪಣೆ ಮಾಡಲಾಗುತ್ತಿದೆ. ಅದಕ್ಕಾಗಿ ಅಗಸ್ಟ್ 30ರಂದು ಗೊಟಗೋಡಿ ಉತ್ಸವ ರಾಕ್ ಗಾರ್ಡನದಿಂದ ಪುರಸಭೆ ವೃತ್ತದವರೆಗೆ ಅದ್ದೂರಿ ಮೇರವಣಿಗೆ ಮೂಲಕ ತರಲಾಗುತ್ತದೆ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಪಂಚಮಸಾಲಿ ಸಮಾಜದ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಪ್ರತಿ ಕಾರ್ಯಕ್ಕೆ ಸಕಾಲ ಕೂಡಿ ಬರಬೇಕು. ಆಗ ಕೆಲಸಗಳು ಸರಳವಾಗಿ ನಡೆಯುತ್ತವೆ. ಚನ್ನಮ್ಮ ಮೂರ್ತಿ ಲೋಕಾರೆ್ಣ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾಜದ ಶ್ರೇಯೋಭಿವೃದ್ಧಿಗಾಗಿ ಪ್ರತಿಯೊಬ್ಬರ ಪಾತ್ರ ಬಹುಮುಖ್ಯವಾಗಿದ್ದು, ಅದರ ಏಳಿಗೆಗಾಗಿ ಎಲ್ಲರ ಸಂಕಲ್ಪ ಅವಶ್ಯವಾಗಿದೆ. ಹೂ, ಜೇನಿನಂತೆ ಪರಸ್ಪರ ಸಹಕಾರ, ಬೆಂಬಲದಿಂದ ಕಾರ್ಯ ನಿರ್ವಹಿಸಬೇಕು. ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡುವಂತಾಗಬೇಕು. ಸಮಾಜದಲ್ಲಿ ಕಡುಬಡ ಜನತೆಗೆ ಸ್ಪಂದಿಸುವ ಜತೆಗೆ ಸಮಾಜಮುಖಿ ಕಾರ್ಯ ನಿರ್ವಹಿಸಬೇಕು. ಎಂದ ಅವರು 2ಎ ಮೀಸಲಾತಿ ಸುಮಾರು ವರ್ಷಗಳಿಂದ ಹೋರಾಟ ನಡೆದಿದ್ದು, ರಾಜ್ಯ ಸರ್ಕಾರಕ್ಕೆ ಮೀಸಲಾತಿ ನೀಡುವ ಹಕ್ಕನ್ನು ನೀಡಿದ್ದು, ಮೀಸಲಾತಿ ಪಡೆಯಲು ಸರಳವಾಗಿದೆ. ಮೀಸಲಾತಿ ತರುವ ಕಾರ್ಯ ಪೀಠಕ್ಕೆ ಬಿಡಿ, ಪೀಠ ಸಮಾಜದ ಬೇಕು,ಬೇಡಿಕೆಗಳನ್ನು ಈಡೇರಿಸುವ ಕಾರ್ಯ ಕೈಗೊಂಡಿದೆ.ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಸಮಾಜದ ಸಮುದಾಯ ಭವನ ನಿಮಾಣಕ್ಕೆ ಒಂದು ಎಕರೆ ಜಮೀನ ನೀಡಿದ್ದು ಪೀಠಕ್ಕೆ ಸಂತಸ ತಂದಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಶ್ರೀಗಳ ಮಾರ್ಗದರ್ಶನದಂತೆ ಪ್ರತಿಯೊಬ್ಬರು ನಡೆಯುತ್ತಿದ್ದು, ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೆ ತಲುಪಿಸುವ ಕಾರ್ಯ ನಮ್ಮದಾಗಬೇಕು. ಪಂಚಮಸಾಲಿ ಸಮುದಾಯ ಭವನಕ್ಕೆ ಒಂದು ಎಕರೆ ಜಮೀನನ್ನು ದಾನವಾಗಿ ನೀಡುತ್ತೇನೆ ಎಂದರು.
ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ವಸ್ತ್ರದ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಶಂಭಣ್ಣ ನೇರ್ತಿ ಮಾತನಾಡಿದರು. ಮುಖಂಡರಾದ ವೀರೇಶ ಆಜೂರ, ಗಂಗಣ್ಣ ಸಾತಣ್ಣವರ, ಪ್ರೇಮಕ್ಕ ಪಾಟೀಲ, ವಸಂತಾ ಬಾಗೂರ, ಅರುಣ ಹುಡೆದಗೌಡ್ರ, ದೇವಣ್ಣ ಚಾಕಲಬ್ಬಿ, ಸಿ.ಎಸ್.ಪಾಟೀಲ, ಎನ್.ಸಿ.ಪಾಟೀಲ, ಈಶ್ವರ ಹರವಿ, ಮೇಘರಾಜ ಕೂಲಿ,ಚನ್ನುಕುಮಾರ ದೇಸಾಯಿ, ಬಸಣ್ಣ ಗೊಬ್ಬಿ, ಶಂಭಣ್ಣ ಆಜೂರ, ರೇಣುಕಗೌಡ ಪಾಟೀಲ,ಶ್ರೀಕಾಂತ ಪೂಜಾರ ಸೇರಿದಂತೆ ಅನೇಕ ಸಮಾಜದ ಮುಖಂಡರು ಇದ್ದರು.