ಬಳ್ಳಾರಿ

ಇಂಡಿಯಾ ನೌ ಡಿಜಿಟಲ್ ಚಾನಲ್ ಆರಂಭ

ಇಂಡಿಯಾ ನೌ ಡಿಜಿಟಲ್ ಚಾನಲ್ ಆರಂಭ


ಲೋಕದರ್ಶನ ವರದಿ 

ಬಳ್ಳಾರಿ 06: ಹಳಿ ತಪ್ಪುವ ಸಮಾಜ ಮತ್ತು ರಾಜಕಾರಣವನ್ನು ತಿದ್ದಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವುದೇ  ಪತ್ರಕರ್ತರ ಪ್ರಮುಖ ಜವಬ್ದಾರಿ, ಅದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿ ಪತ್ರಿಕಾಧರ್ಮವನ್ನು ಕಾಪಾಡಿಕೊಳ್ಳಬೇಕು, ಸಂವಿಧಾನದ ನಾಲ್ಕನೇ ಅಂಗವಾದ ಮಾದ್ಯಮರಂಗ ಕಾವಲು ನಾಯಿಯಂತೆ ಕೆಲಸ ಮಾಡಿ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕೆಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದರು.  


ಅವರು ಬಳ್ಳಾರಿಯ ಡಾ. ರಾಜ್‌ಕುಮಾರ್ ರಸ್ತೆಯ ಬಿಡಿಎಎ ಸಭಾಂಗಣದಲ್ಲಿ ಎಸ್‌ಆರ್‌ಎಸ್ ಭಕ್ತಿ ಚಾನಲ್ ಮತ್ತು ಇಂಡಿಯಾ ನೌ ಡಿಜಿಟಲ್ ಚಾನೆಲ್ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟನೆ ಮಾಡಿ, ಇಂಡಿಯಾ ನೌ ಡಿಜಿಟಲ್ ಚಾನಲ್‌ಗೆ ಚಾಲನೆ ಕೊಟ್ಟು ಮಾತನಾಡಿದರು.  

ಕಾರ್ಯಕ್ರಮದಲ್ಲಿ ಹಂಪಿ ಸಾವಿರ ದೇವರಮಠ ಎಮ್ಮಿಗನೂರು ವಾಮದೇವ ಮಹಂತ ಶಿವಾಚಾರ್ಯಸ್ವಾಮಿಗಳು ಮಾತನಾಡುತ್ತಾ, ದೇಶದ ಗಡಿಯಲ್ಲಿ ಸೈನಿಕರು ಗನ್ ಹಿಡಿದುಕೊಂಡು ದೇಶ ಕಾದರೆ, ದೇಶದೊಳಗೆ ಪತ್ರಕರ್ತರು ಪೆನ್ ಹಿಡಿದು ಸಮಾಜವನ್ನು ತಿದ್ದುತ್ತಾರೆ, ಪೆನ್ನೆ ಗನ್ನಿಗಿಂತ ಶಕ್ತಿಯುತವಾದ ಆಯುಧ ಎಂದರು.  


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಗರ ಶಾಸಕ ಸೋಮಶೇಖರರೆಡ್ಡಿ, ಮಾಜಿ ಸಂಸದ ಜಿ ಶಾಂತಮ್ಮ, ಪಿ ಗಾದೆಪ್ಪ, ವಕೀಲರ ಸಂಘದ ಎರೆಗೌಡ, ಕ.ರ.ವೇ (ಪ್ರ.ಬ) ರಾಜ್ಯ ಸಂಘಟನಾ ಸಂಚಾಲಕರಾದ ಅದ್ದಿಗೇರಿ ರಾಮಣ್ಣ, ಬೂಡಾ ಮಾಜಿ ಅಧ್ಯಕ್ಷ ದಮ್ಮೂರು ಶೇಖರ್, ಕುಡಿತಿನಿ ಶ್ರೀನಿವಾಸ್, ವಿವೇಕ್ ಪ್ಯಾರಂ ಸೇರಿದಂತೆ ಇತರರಿದ್ದರು.  

ಕಾರ್ಯಕ್ರಮದಲ್ಲಿ ಅಭಿಷೇಕ ಕಲಾತಂಡ, ಜೀಲಾನಿಭಾಷಾ ಕಲಾತಂಡ ಮತ್ತು ಇತರ ನೃತ್ಯಗಾರರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.  

ಇಂಡಿಯಾ ನೌ ಡಿಜಿಟಲ್ ಚಾನಲ್‌ನ ಕಾರ್ಯನಿರ್ವಾಹಕ ಅಧಿಕಾರಿ ಕಂದಕೂರಿ ರಾಮುಡು, ಎಸ್‌.ಆರ್‌.ಎಸ್ ಭಕ್ತಿ ಚಾನಲ್‌ನ ಮುಖ್ಯಸ್ಥ ಗೋಪಾಲ್ ಚಾಕ್ಲೆ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ವರದಿಗಾರರಿದ್ದರು. 


ಸುದ್ದಿ ಓದಿ