ಮನರಂಜನೆ

ನಗು ಸರ್ವ ತೊಂದರೆಗಳಿಗೂ ದಿವ್ಯೌಷಧ: ನಾನಾ ಪಾಟೇಕರ್

ನಗು ಸರ್ವ ತೊಂದರೆಗಳಿಗೂ ದಿವ್ಯೌಷಧ: ನಾನಾ ಪಾಟೇಕರ್

ಪುಣೆ, ಸೆ. 30: ಎಲ್ಲ ತೊಂದರೆಗಳಿಗೂ ನಗು ಅತ್ಯುತ್ತಮ ಔಷಧಿಯಾಗಿದೆ. ನಿಮ್ಮ ಸಮಸ್ಯೆಗಳನ್ನು, ದುಃಖಗಳನ್ನು ಎಂದಿಗೂ ಇತರರಿಗೆ ಹೇಳಬೇಡಿ ಆದರೆ ನಿಮ್ಮ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ, ನೀವು ಜಗತ್ತಿನ ಅತ್ಯಂತ ಸಂತೋಷದ ವ್ಯಕ್ತಿಯಾಗುತ್ತೀರಿ ಎಂದು ನಟ ನಾನಾ ಪಾಟೇಕರ್ ಹೇಳಿದ್ದಾರೆ.

ಸಿಂಬಯೋಸಿಸ್ ವಿಶ್ವವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ‘ವಿಶ್ವ ಹೃದಯ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯೊಂದಿಗೆ ಆರೋಗ್ಯಕರ ನಡಿಗೆಯಲ್ಲಿ ಭಾಗವಹಿಸಿದ ಪಾಟೇಕರ್ ಸಿಂಬಿಥಾನ್ 2021 ಅನ್ನು ಉದ್ಘಾಟಿಸಿದರು, 

ಆರೋಗ್ಯ ವಿಜ್ಞಾನ ವಿಭಾಗದ ಡೀನ್ ಡಾ. ರಾಜೀವ್ ಯರವ್ಡೇಕರ್, ಡಾ. ವಿದ್ಯಾ ಯರವ್ಡೇಕರ್, ಪ್ರೊ ಚಾನ್ಸೆಲರ್, ಎಸ್ ಐ ಯು, ಡಾ. ರಜನಿ ಗುಪ್ತೆ, ಎಸ್ ಐ ಯು ಉಪ ಕುಲಪತಿ ಮತ್ತು ಸಿಂಬಿಯೋಸಿಸ್ ವಿಶ್ವವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಿಇಒ ಡಾ.ವಿಜಯ ನಟರಾಜನ್ ಮತ್ತು ಡೀನ್ ಡಾ.ವಿಜಯ ಸಾಗರ್ ಮತ್ತಿತರರು ಕಾರ್ಯಕ್ರಮದಲ್ಲಿ  ಹಾಜರಿದ್ದರು.

ಸುದ್ದಿ ಓದಿ