ಮನರಂಜನೆ

ಪೃಥ್ವಿರಾಜ್ ಸುಕುಮಾರನ್ ಅಭಿನಯದ ನೂತನ ಚಿತ್ರ ‘ಕಾಪಾ” ಮೋಷನ್ ಪೋಸ್ಟರ್

ಪೃಥ್ವಿರಾಜ್ ಸುಕುಮಾರನ್ ಅಭಿನಯದ ನೂತನ ಚಿತ್ರ ‘ಕಾಪಾ” ಮೋಷನ್ ಪೋಸ್ಟರ್

  ಮುಂಬೈ, ಆಗಸ್ಟ್ 18  ದಕ್ಷಿಣದ ತಾರೆ ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರ "ಕಾಪ" ಘೋಷಿಸಿದ್ದು, ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.
  ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ನಡೆದ ಕಥಾಹಂದರದ ಈ ಚಿತ್ರದಲ್ಲಿ ಮಂಜು ವಾರಿಯರ್, ಆಸಿಫ್ ಅಲಿ ಮತ್ತು ಅನ್ನಾ ಬೆನ್ ಕಾಣಿಸಿಕೊಳ್ಳಲಿದ್ದಾರೆ. ಇದರ ನೇತೃತ್ವವನ್ನು ಸಿನಿಮಾಟೋಗ್ರಾಫರ್ ನಿರ್ದೇಶಕ ವೇಣು ವಹಿಸಲಿದ್ದಾರೆ. ಜಿ ಆರ್ ಇಂದುಗೋಪನ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಹೊಣೆ ವಹಿಸಿಕೊಂಡಿದ್ದಾರೆ. ಚಿತ್ರದ ಕುರಿತು ಪೃಥ್ವಿರಾಜ್ ಟ್ವೀಟ್ ಮಾಡಿದ್ದಾರೆ.
  ಸಂಗೀತವನ್ನು ಜಸ್ಟಿನ್ ವರ್ಗೀಸ್ ಸಂಯೋಜಿಸಿದ್ದಾರೆ, ಸಂಕಲನ ಮಹೇಶ್ ನಾರಾಯಣನ್ ಮತ್ತು ಛಾಯಾಗ್ರಹಣವನ್ನು ಸಾನು ಜಾನ್ ವರುಗೀಸ್ ಮಾಡಿದ್ದಾರೆ. "ಕಾಪಾ" ಚಿತ್ರವನ್ನು ಡಾಲ್ವಿನ್ ಕುರಿಯಕೋಸ್, ಜಿನು ವಿ ಅಬ್ರಹಾಂ ಮತ್ತು ದಿಲೀಶ್ ನಾಯರ್ ನಿರ್ಮಿಸಿದ್ದಾರೆ. ಕೇರಳದ ಸಾಮಾಜಿಕ ವಿರೋಧಿ ಚಟುವಟಿಕೆಗಳ  ನಿಯಂತ್ರಣ ಕಾಯ್ದೆಯ ಆಧಾರದಲ್ಲಿ ಚಿತ್ರಕಥೆ ಹೆಣೆಯಲಾಗಿದೆ.
  ದಕ್ಷಿಣ ಸೂಪರ್ ಸ್ಟಾರ್ ಗಳಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ "ಕಾಪಾ" ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. "ಪೃಥ್ವಿರಾಜ್ ಸುಕುಮಾರನ್, ಆಸಿಫ್ ಅಲಿ, ಮಂಜು ವಾರಿಯರ್ ಮತ್ತು ಅನ್ನಾ ಬೆನ್ ನಟಿಸಿರುವ ವೇಣು ನಿರ್ದೇಶನದ '' ಕಾಪಾ '' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕುರಿತು ಮೋಹನ್ ಲಾಲ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
    ಈ ಚಲನಚಿತ್ರವನ್ನು (ಕೇರಳ ಚಲನಚಿತ್ರ ನೌಕರರ ಒಕ್ಕೂಟ) ಫೆಫ್ಕಾ ಬರಹಗಾರರ ಒಕ್ಕೂಟವು ಪ್ರಸ್ತುತಪಡಿಸುತ್ತಿದೆ.

ಸುದ್ದಿ ಓದಿ