ಚಿಕ್ಕೋಡಿ

ಬ್ರಿಡ್ಜ ಕಂ ಬಂದಾರ ನಿರ್ಮಾಣಕ್ಕೆ ಭೂಮಿಪೂಜೆ

ಬ್ರಿಡ್ಜ ಕಂ ಬಂದಾರ ನಿರ್ಮಾಣಕ್ಕೆ ಭೂಮಿಪೂಜೆ
ಚಿಕ್ಕೋಡಿ: ಯರನಾಳ ಗ್ರಾಮದಲ್ಲಿ ಬ್ರಿಡ್ಜ ಕಂ ಬಂದಾರ ನಿರ್ಮಾಣ ಕಾಮಗಾರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೂಮಿಪೂಜೆ ನೇರವೆರ

ಚಿಕ್ಕೋಡಿ 6:  ಲೋಕಸಭಾ ವ್ಯಾಪ್ತಿಯ ಯರನಾಳ ಗ್ರಾಮದ ಹತ್ತಿರ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ ಕಂ ಬಂದಾರ ನಿರ್ಮಾಣ ಮಾಡಲಾಗುತ್ತಿದ್ದು, ಈ ಕಾಮಗಾರಿಗೆ ಸಚಿವೆ ಶಶಿಕಲಾ ಜೊಲ್ಲೆ ಇವರ ಪ್ರಯತ್ನದಿಂದ ಸಣ್ಣ ನೀರಾವರಿ ಇಲಾಖೆ ಅನುದಾನದಡಿ 1.20 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಮಂಗಳವಾರ ನಿಪ್ಪಾಣಿ ತಾಲೂಕಿನ ಯರನಾಳ ಗ್ರಾಮದಲ್ಲಿ ಬ್ರಿಡ್ಜ ಕಂ ಬಂದಾರ ನಿರ್ಮಾಣ ಕಾಮಗಾರಿ ಹಾಗೂ ಬಾಬು ಜಗಜಿವನರಾಂ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಸೇತುವೆ ನಿರ್ಮಾಣದಿಂದ ಜನರ ಸಂಚಾರ ಸುಗಮವಾಗಲಿದೆ ಎಂದರು.

ನಿಪ್ಪಾಣಿ ಮತಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ವೃತ್ತ ಅಗಲಿಕರಣ, ಸೇತುವೆ ನಿರ್ಮಾಣ, ಸರ್ಕಾರಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ಶಾಲಾ ಕಾಲೇಜು ಸುಧಾರಣೆಗೆ ಅನುದಾನ ನೀಡಲಾಗಿದೆ. ಯರನಾಳ ಗ್ರಾಮದ ನಾಗರಿಕರ ಜೊತೆ ರೈತರು ಕೂಡ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಸೇತುವೆ ನಿರ್ಮಾಣ ಜೊತೆಗೆ ಗ್ರಾಮದಲ್ಲಿ ರಸ್ತೆ, ಸಮುದಾಯ ಭವನ, ಅಂಗನವಾಡಿ ಕಟ್ಟಡ, ಗ್ರಾಮ ಪರಿಮಿತಿಯಲ್ಲಿ ರಸ್ತೆ ಸುಧಾರಣೆ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿ.ಪಂ ಸದಸ್ಯ ಸಿದ್ಧು ನರಾಟೆ, ನಿಪ್ಪಾಣಿ ನಗರಸಭೆ  ಅಧ್ಯಕ್ಷ ಜಯವಂತ ಭಾಟಲೆ, ಪ್ರಣವ ಮಾನವಿ, ಸದ್ದಾಂ ನಗಾರಜಿ, ಬಂಟಿ ಪಾಟೀಲ, ಬಾಳಾಸಾಬ ಪಾಟೀಲ, ಗುಲಾಬರಾವ ಪಾಟೀಲ, ದಿಗ್ವಿಜಯ ನಿಂಬಾಳಕರ, ಸುನೀಲ ವಡಗಾವೆ, ಗ್ರಾ.ಪಂ ಅಧ್ಯಕ್ಷ ಸಂಜಯ ಪಾಟೀಲ, ಸುರೇಶ ಪವಾರ, ಜಿತೇಂದ್ರ ಕರಡೆ, ಅಶೋಕ ಐಹೊಳೆ, ತಾ.ಪಂ ಇ ಒ-ಮಂಜುನಾಥ ಉಳಾಗಡ್ಡೆ, ಸಣ್ಣ ನಿರಾವರಿ ಇಲಾಖೆ ಅಭಿಯಂತ ಲಮಾಣಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಸುದ್ದಿ ಓದಿ