ಬಳ್ಳಾರಿ

ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ

ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ


ಲೋಕದರ್ಶನ ವರದಿ 

ಕಂಪ್ಲಿ 21: ಸಮೀಪದ ಹೊಸ ದರೋಜಿ ಬಸ್ ನಿಲ್ದಾಣ ಕಾಮಗಾರಿಗೆ ಡಿಎಂಎಫ್ ನಿಧಿಯಲ್ಲಿ 40ಲಕ್ಷ ರೂ.ಗಳ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ ಮತ್ತು ನಬಾರ್ಡ್‌ ಯೋಜನೆಯ 16ಲಕ್ಷ ರೂ.ಗಳಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ, 12ಲಕ್ಷ ರೂ.ಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು ಸಂಡೂರು ಶಾಸಕ ಈ. ತುಕರಾಂ ಉದ್ಘಾಟಿಸಿದರು ಮತ್ತು  ಕೆರೆಗೆ ಬಾಗಿನ ಅರ​‍್ಿಸಿದರು. 


ನಂತರ ಮಾತನಾಡಿ ಫೆಬ್ರವರಿ ತಿಂಗಳಲ್ಲಿ 26ಕೋಟಿ ರೂಪಾಯಿಗಳಲ್ಲಿ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಮುಂದಿನ ಮೂರು ವರ್ಷಗಳಲ್ಲಿ ಸಂಡೂರು ತಾಲೂಕನ್ನು ಜಿಲ್ಲೆಯಲ್ಲಿಯೇ ಮಾದರಿ ತಾಲೂಕನ್ನಾಗಿ ರೂಪಿಸಲಾಗುವುದು. ರೈತರ ಹೊಲಗಳಿಗೆ ಕಾಲುವೆಗಳ ಮುಖಾಂತರ ನೀರು ಹೋಗುವ ವಿತರಣೆ ಕಾಲುವೆಗೆ 3ಕೋಟಿ ರೂಪಾಯಿ ಅನುದಾನ  ಹ ದರೋಜಿ ಈರಮ್ಮ 50ಲಕ್ಷರೂದಲ್ಲಿ ಸಿ.ಸಿ.ರಸ್ತೆ ನಿರ್ಮಿಸಿದೆ ಈಗಾಗಲೇ 15ಕೋಟಿ ರೂ.ಗಳ ವೆಚ್ಚದಲ್ಲಿ ದೇವಲಾಪುರದಿಂದ ತಿಮ್ಮಲಾಪುರ ರಸ್ತೆ ನಿರ್ಮಿಸಿದೆ. ಸಂಪರ್ಕ ರಸ್ತೆ ನಿರ್ಮಿಸಿದೆ. 8ಕೋಟಿ ರೂ.ಗಳ ವೆಚ್ಚದಲ್ಲಿ ಏಳುಬೆಂಚಿ, ಹಳೆ ಮಾದಾಪುರಗಳಿಗೆ ಗದ್ದೆ ಮಾಗಾಣಿ ರಸ್ತೆ ನಿರ್ಮಿಸಿದೆ. ಹಳೆದರೋಜಿ ಕಂದಾಯಗ್ರಾಮವಾಗಿದೆ. ಹಳೆ ಮಾದಾಪುರ ಗ್ರಾಮವನ್ನು ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಸೇರಿಸಿದೆ. ಅಲ್ಲದೆ, ದರೋಜಿ ಕೆರೆ ಹಿಂಬಂದಿಯ ಗದ್ದೆಗಳಿಗೆ ನೀರು ಸರಾಗವಾಗಿ ಸಾಗಿಸಲು 4.50ಕೋಟಿ ರೂ.ಗಳ ಅನುದಾನ ಒದಗಿಸಿದ್ದು, 3ಕೋಟಿ ರೂಪಾಯಿ ವೆಚ್ಚದಲ್ಲಿ ವಿತರಣಾ ಕಾಲುವೆಗಳ ದುರಸ್ತಿಗೊಳಿಸಿ, ಬಂಡ್ ಮೇಲಿನ ಜಾಲಿ ತೆರವುಗೊಳಿಸಲಾಗುವುದು. 10ಲಕ್ಷ ರೂ.ಗಳಲ್ಲಿ ಹಳೆ ದರೋಜಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಹಳೆ ದರೋಜಿಯಲ್ಲಿ ಡಿಜಿಟಲ್ ಲೈಬ್ರರಿ ಆರಂಭಿಸಲಾಗುವುದು ಎಂದು ಹೇಳಿದರು.  


ಇದೇ ಸಂದರ್ಭದಲ್ಲಿ ಹಳೇ ದರೋಜಿ ಗ್ರಾಮ ಪಂಚಾಯಿತಿ ಸದಸ್ಯಮಾನಪ್ಪಾಚಾರ್, ಎಸ್‌.ವೀರ​‍್ಪ, ಹಂಪಣ್ಣ ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಗೊಂಡರು. ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಸೇರೆ​‍್ಡಗೊಳಿಸಿಕೊಳ್ಳಲಾಯಿತು. ತೋರಣಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಕಾಂಬ್ರ​‍್ಪ, ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೈ.ಗಂಗಾಧರಗೌಡ, ಪ್ರಮುಖರಾದ ವಿ.ಜನಾರ್ಧನ, ಪಿ.ಎಸ್‌.ಲಿಂಗಪ್ಪ, ಸದ್ದಾಂ, ಆನಂದ್ ಪದ್ಮಶಾಲಿ, ಎ.ನರಸಿಂಹಮೂರ್ತಿ, ಮಾರೆಪ್ಪ, ಮಾದಾಪುರ ವೆಂಕಟೇಶ್, ಮಾದಾಪೂರ್ ಸೋಮಶೇಖರ್, ರಸೂಲ್‌ಸಾಬ್, ಅಂಬಣ್ಣ, ಮರಿಸ್ವಾಮಿ, ವಿ.ವೆಂಕಟೇಶ್,ವಿ ತಿಮ್ಮರಾಜು ವಿ.ಬಿ.ನರಸಿಂಹ, ಎ.ರವಿಪ್ರಕಾಶ್, ವಿ.ರಮೇಶ್, ಎಸ್‌.ಹಸೇನ್‌ಪೀರಾ, ಎಸ್‌.ವೀರಭದ್ರ​‍್ಪ, ಸತ್ಯನಾರಾಯಣಶೆಟ್ಟಿ, ಗೋಕುರ್‌ಸಾಬ್, ಹನುಮಯ್ಯ, ಯು.ತಿಮ್ಮಯ್ಯ, ಡಿ.ಬಿ.ಅಂಜಿನಿ, ಮೇಲಗಿರಿ ಷಣ್ಮುಖ ಸೇರಿ ಇತರರಿದ್ದರು. 


ಸುದ್ದಿ ಓದಿ