ತಾಳಿಕೋಟಿ

26ರಂದು ಏತ ನೀರಾವರಿ ಯೋಜನ ಕಾಮಗಾರಿಗೆ ಸಿಎಂ ಬೊಮ್ಮಾಯಿಯಿಂದ ಭೂಮಿ ಪೂಜೆ

26ರಂದು ಏತ ನೀರಾವರಿ ಯೋಜನ ಕಾಮಗಾರಿಗೆ ಸಿಎಂ ಬೊಮ್ಮಾಯಿಯಿಂದ ಭೂಮಿ ಪೂಜೆ

ತಾಳಿಕೋಟೆ14: ತಾಲೂಕಿನ ಬಹು ನಿರಿಕ್ಷಿತ ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ 26 ರಂದು ಭೂಮಿ ಪೂಜೆ ನೇರವೇರಿಸಲಿದ್ದಾರೆ ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು. 

ಅವರು ತಾಲೂಕಿನ ಕೊಡಗಾನೂರ ಕ್ರಾಸ್‌ದಲ್ಲಿರುವ ಬುದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯ ಕಾಮಗಾರಿಯ ಸಾಮಗ್ರಿಗಳ ಪರೀಶೀಲನೆ ನಡೆಸಿ ಮಾತನಾಡಿದರು. 

ದೇವರ ಹಿಪ್ಪರಗಿ ಮತಕ್ಷೇತ್ರದ ಬಹುನೀರಿಕ್ಷಿತ ಯೋಜನೆಯಾದ ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಗೆ ಮೊದಲ ಹಂತದಲ್ಲಿ 523 ಕೋಟಿ ಅನುದಾನವನ್ನು ಒದಗಿಸಲಾಗಿತ್ತು. ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದೆ. ಎರಡನೇ ಹಂತದ ಕಾಮಗಾರಿ ಕೈಕೊಳ್ಳಲು 796 ಕೋಟಿ ಅನುದಾನ ಮಂಜುರಾಗಿದ್ದು ಶಂಕರನಾರಾಯಣ ಕನ್ಸಟ್ರಕ್ಸನ್ ಕಂಪನಿಗೆ ಗುತ್ತಿಗೆ ಲಭಿಸಿದೆ. ಗುತ್ತಿಗೆದಾರರು ಈಗಾಗಲೇ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಎಪ್ರೀಲ್ 26ರಂದು ಸಿಎಂ ಬಸವರಾಜ ಬೊಮ್ಮಾಯಿಯವರು ಬೆಳಿಗ್ಗೆ 10.30 ಗಂಟೆಗೆ ಭೂಮಿ ಪೂಜೆಯನ್ನು ನೇರವೇರಿಸಲು ಒಪ್ಪಿಕೊಂಡಿದ್ದಾರೆ. ಸದ್ಯ ಎಲ್ಲ ಸಿದ್ದತೆಗಳನ್ನು ಪರೀಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬೂಮಿ ಪೂಜೆ ಸ್ಥಳವನ್ನು ಅಂತಿಮಗೊಳಿಸಲಾಗುವದು. ಬುದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರೈತರ ಹೊಲಗಳಿಗೆ ನೀರುಣಿಸುವ ಯೋಜನೆಯಾಗಿದೆ. ಯೋಜನೆಯಿಂದ 55 ಸಾವಿರ ಎಕರೆ ಹೊಲಗಳಿಗೆ ನೀರುಣಲಿದೆ. ನೀರುಣಿಸಲು ಒಟ್ಟು 1060 ಬ್ಲಾಕ್‌ಗಳನ್ನು ಮಾಡಲಾಗಿದ್ದು ಒಂದು ಬ್ಲಾಕ್ ಕನಿಷ್ಠ 25 ಎಕರೆಯಿಂದ ಹಿಡಿದು ಗರಿಷ್ಟ 75 ಎಕರೆ ಪ್ರದೇಶವನ್ನು ಹೊಂದಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿರುವದರಿಂದ ಟೇಲ್ ಎಂಡ್‌ದವರೆಗೂ ನೀರು ಹರಿಯಲಿದೆ. ಈಗಾಗಲೇ ಈ ಯೋಜನೆಗೆ 2.56 ಟಿಎಮ್‌ಸಿ ನೀರನ್ನು ಹಂಚಿಕೆ ಮಾಡಿರುವದರಿಂದ ಕಾಮಗಾರಿ ಮುಕ್ತಾಯವಾದ ತಕ್ಷಣ ರೈತರ ಜಮೀನುಗಳಿಗೆ ನೀರು ಹರಿಯಲಿದೆ. ಮತಕ್ಷೇತ್ರದ ಕೆರೆ ನೀರು ತುಂಬುವ ಯೋಜನೆಯಿಂದ 25 ಸಾವಿರ ಎಕರೆ ಜಮೀನು ನೀರಾವರಿಗೆ ಒಳಪಟ್ಟಿದೆ. ಇನ್ನು ವಿಜಯಪೂರ ಚಿಮ್ಮಲಗಿ ಯೋಜನೆಯಲ್ಲಿ 530 ಕೋಟಿ ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಿಯಾಗಿದೆ. ಎಲ್ಲ ನೀರಾವರಿ ಕಾಮಗಾರಿಗಳು ಮುಗಿದರೆ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಶೇ.92 ರಷ್ಟು ನೀರಾವರಿಗೆ ಒಳಪಡಲಿದೆ. ಬೂದಿಹಾಳ ಪಿರಾಪೂರ ಏತ ನೀರಾವರಿ ಯೋಜನೆಯಿಂದ ಸುಮಾರು 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದರು. ಮತಕ್ಷೇತ್ರದ ಎಲ್ಲ ರೈತರನ್ನು ಕರೆಸಿ ಬೃಹತ್ ಸಾರ್ವಜನಿಕ ಸಮಾರಂಭವನ್ನು ಹಮ್ಮಿಕೊಳ್ಳಲಾಗುವದು ಎಂದರು. 

ಈ ಸಂದರ್ಭದಲ್ಲಿ ಕೆಬಿಜೆಎನ್‌ಎಲ್ ಕಾರ್ಯಪಾಲಕ ಅಬಿಯಂತರ ಬಿ.ಟಿ.ಪಾಟೀಲ ಸಹಾಯಕ ಕಾರ್ಯನಿವಾಹಕ ಅಬಿಯಂತರ ರವಿ ಚಂದ್ರಗಿರಿರವರ, ಸಹಾಯಕ ಇಂಜಿನಿಯರ್ ವಿಶ್ವನಾಥ ಬಿರಾದಾರ, ಮುಖಂಡರಾದ ಸಂಗನಗೌಡ ಹೆಗರಡ್ಡಿ, ಪ್ರಶಾಂತ ಹಾವರಗಿ, ಬಸನಗೌಡ ಬಿರಾದಾರ, ಸಿದ್ದು ಬುಳ್ಳಾ, ಶೇಖರಗೌಡ ತಂಗಡಗಿ, ಶರಣಗೌಡ ಗೋಂಟಖಂಡ್ಕಿ, ರಾಮನಗೌಡ ನಾವದಗಿ, ನಿಂಗನಗೌಡ ಬಿರಾದಾರ, ಗುರನಗೌಡ ಗುರಡ್ಡಿ, ಮುದಕಪ್ಪಗೌಡ ರಾರಡ್ಡಿ, ಶರಣಗೌಡ ಪದರಡ್ಡಿ, ಬಸನಗೌಡ ಕಿರಶ್ಯಾಳ, ವೆಂಕಟರೆಡ್ಡಿ ನಾಗರಡ್ಡಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ