ಕಪ್ಪಲಗುದ್ದಿ ಗ್ರಾಮದಲ್ಲಿ ಜಮೀನು ವಿವಾದ, ಎರಡು ಗುಂಪುಗಳ ಮಧ್ಯೆ ಘರ್ಷಣೆ; ಸುರೇಶ ಗೌರವ್ವಗೋಳ ಎಂಬ ವ್ಯಕ್ತಿಯ ಮೇಲೆ ಮಾರನಾಂತಿಕ ಹಲ್ಲೆ
ಪಾಲಬಾವಿ 26 : ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಎರಡು ಗುಂಪುಗಳ ಮಧ್ಯೆ ನಡೆದ ಹಲ್ಲೆಯಲ್ಲಿ ವ್ಯಕ್ತಿ ಓರ್ವನು ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಕಪ್ಪಲುಗುದ್ದಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಪ್ಪಲಗುದ್ದಿ ಗ್ರಾಮದಲ್ಲಿ ಕಳೆದ ದಿ 23ರಂದು ಮಂಗಳವಾರ ಮಧ್ಯಾಹ್ನ 2ಗಂಟೆಯ ಸಮಯದಲ್ಲಿ ನನ್ನ ಸಹೋದರ ಸುರೇಶ ಗೌರವ್ವಗೋಳ ಎಂಬ ವ್ಯಕ್ತಿಯ ಮೇಲೆ 15ಕಿಂತಲೂ ಹೆಚ್ಚು ಜನರು ಸೇರಿಕೊಂಡು ಕಟ್ಟಿಗೆಯಿಂದ ಬಡೆದು ಹಲ್ಲೆ ಮಾಡಿದ್ದರಿಂದ ತಲೆಗೆ ಬಲವಾದ ಹೊಡೆತ ಬಿದ್ದ ಕಾರಣ ರಕ್ತದ ಮಡುವಿನಲ್ಲಿ ಬಿದ್ದಿರುವ ಸುರೇಶ ಗೌರವಗೋಳ ಎಂಬ ವ್ಯಕ್ತಿಯು ಮೂಡಲಗಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ: ಕಪ್ಪಲಗುದ್ದಿ ಗ್ರಾಮದ ಸರಹದ್ದಿನಲ್ಲಿಯ ರಿಜಿಸ್ಟರ್ ನಂಬರ್ 111/5 ಎರಡು ಎಕರೆ 30ಗುಂಟೆ ಜಮೀನಿನ ಪೈಕಿ 22ಗುಂಟೆ ಜಮೀನನ್ನು 2006ರಲ್ಲಿ ಲಕ್ಷ್ಮಣ ಹೊಳೆಪ್ಪ ಗೌರವ್ವಗೋಳ ಜಮಿನನ್ನು ಖರೀದಿ ಮಾಡಿಕೊಂಡಿದ್ದನ್ನು, ಇವರ ಹೆಸರಲ್ಲಿ 2014ರಲ್ಲಿ ಕೋರ್ಟಿನಲ್ಲಿ ಡಿಕ್ರಿ ಕೂಡ ಮಾಡಿಕೊಂಡಿರುತ್ತಾರೆ. ಸದರಿ ಜಮೀನು ಪ್ರಸ್ತುತ ಸಂಪೂರ್ಣವಾಗಿ ಸುರೇಶ ಗೌರವ್ವಗೋಳ ಕಬ್ಜೆಯಲ್ಲಿದ್ದು ಅದರಲ್ಲಿ ಅರಿಶಿನ ಬೆಳೆಯನ್ನು ಹಾಕಿದ್ದು ಆ ಜಮೀನು ಒಡೆತನದ ಕುರಿತಾದ ವಿವಾದವು ಮಾನ್ಯ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇರುತ್ತದೆ.
ಇದೇ ಜೂನ್ 23ರಂದು ಮಂಗಳವಾರ ಮಧ್ಯಾಹ್ನ 2ಗಂಟೆಯ ಸಮಯದಲ್ಲಿ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಶ್ರೀಶೈಲ ಕಿತ್ತೂರ, ಅಲ್ಲಪ್ಪ ಕಿತ್ತೂರ, ಅಡಿವೆಪ್ಪ ಕಿತ್ತೂರ, ಬಸಪ್ಪ ಕಿತ್ತೂರ, ಭೀಮಪ್ಪ ಕಿತ್ತೂರ, ಶ್ರೀಧರ ಕಿತ್ತೂರ, ಈರ್ಪ ಕಿತ್ತೂರ, ಶಿವಲಿಂಗ ಕಿತ್ತೂರ, ಹಾಗೂ ಖಾನಟ್ಟಿ ಗ್ರಾಮದ ಹೊಳೆಪ್ಪ ನಿಂಗನೂರ, ಮಹೇಶ ನಿಂಗನೂರ, ಶಿವಾಪುರ ಗ್ರಾಮದ ಕಸ್ತೂರಿ ಹೊಸತೋಟ, ಹಾಗೂ ಹಂದಿಗುಂದ ಗ್ರಾಮದ ಸಾವಿತ್ರಿ ಬದ್ರಶಟ್ಟಿ ಸೇರಿದಂತೆ 15ರಿಂದ 20 ಕ್ಕೂ ಹೆಚ್ಚು ಜನರು ಕೂಡಿಕೊಂಡು ವಿವಾದದಿಂದ ಕೂಡಿಕೊಂಡಿರುವ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಪೈಪ್ ಲೈನ್ ನ್ನು ಒಡೆದು ಹಾಳು ಮಾಡಿ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಸುರೇಶ ಗೌರವ್ವಗೋಳ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪಿಎಸ್ಐ ಮಾಳಪ್ಪ ಪೂಜಾರಿ, ಹಾಗೂ ಸಿಬ್ಬಂದಿವರು ತನಿಖೆ ಕೈಗೊಂಡಿರುತ್ತಾರೆ.