ಬೈಲಹೊಂಗಲ

ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಕ್ಕೆ ಭೂಮಿ ಪೂಜೆ

ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಕ್ಕೆ ಭೂಮಿ ಪೂಜೆ

ಬೈಲಹೊಂಗಲ 30: ಗ್ರಾಮಗಳನ್ನು ಸ್ವಚ್ಛವಾಗಿಡುವ ಜೊತೆಗೆ ಜನತೆಗೆ ಅದರ ಅರಿವು ಮೂಡಿಸಲು ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದೆ ಎಂದು ಗ್ರಾಪಂ.ಅಧ್ಯಕ್ಷ ಚಂದ್ರಶೇಖರ ಕಡೇಮನಿ ಹೇಳಿದರು.  

ಅವರು ತಾಲೂಕಿನ ತುರುಕರಶೀಗಿಹಳ್ಳಿ ಗ್ರಾಮದಲ್ಲಿ  ಬುಧವಾರ ನರೇಗಾ ಯೋಜನೆಯಡಿಯಲ್ಲಿ  ಘನತ್ಯಾಜ್ಯ ವಸ್ತುಗಳ ವಿಲೇವಾರಿ  ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 

ಗ್ರಾಪಂ.ಉಪಾಧ್ಯಕ್ಷ  ನಾಗಪ್ಪ ಮಾದರ, ಸದಸ್ಯರಾದ ರಾಜಪ್ಪ ಹೊಸಟ್ಟಿ, ಮಂಜುನಾಥ ನೀಲಮ್ಮನವರ, ವಿಶ್ವನಾಥ ಮಿಂಡೊಳ್ಳಿ, ಶೋಭಾ ಕಡೆಮನಿ, ಸಂಗವ್ವ ಮುತ್ತೆನ್ನವರ, ಶಾರವ್ವ ನರಗಟ್ಟಿ, ಚನ್ನವ್ವ ಏಕುಣಿ, ಜಗದೀಶ ತಡಕೋಡ, ಶಿವನಗೌಡ ಪಾಟೀಳಲ, ಶಂಕುತಲಾ ಕಟಗಿ, ಗುತ್ತಿಗೆದಾರ ಶಿವಾನಂದ ಮಡಿವಾಳರ ಹಾಗೂ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ