ಗಂಗಾವತಿ ಬೈಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಭೂಸರ್ವೇ
ಲೋಕದರ್ಶನ ವರದಿ
ಕಂಪ್ಲಿ 31: ಸುಮಾರು ವರ್ಷದಿಂದ ಡಾ. ಅಂಬೇಡ್ಕರ್ ವೃತ್ತದಿಂದ (ಗಂಗಾವತಿ ಬೈಪಾಸ್) ರಸ್ತೆ ಅಭಿವೃದ್ಧಿ ಕಾಮಗಾರಿ ವಿವಾದ ಹಿನ್ನಲೆಯಲ್ಲಿ ಧಾರವಾಡ ಹೈಕೋರ್ಟ್ ಪೀಠದ ಮುಂದಿದ್ದು, ಸದ್ರಿ ಕಾಮಗಾರಿಗೆ ಸಂಬಂಧಿಸಿದಂತೆ ತಕರಾರು ಮಾಡಿದ ವಾದಿಯ ಭೂಮಿ ಗುರುತು ಮಾಡಿ ಸೂಚಿಸುವಂತೆ ನ್ಯಾಯಾಲಯ ಭೂದಾಖಲೆಗಳ ಸಹಾಯಕ ನಿರ್ದೇಶಕರನ್ನು ನೇಮಿಸಿದ ಹಿನ್ನಲೆಯಲ್ಲಿ, ಸೋಮವಾರ ಪಟ್ಟಣದ ಹೊಸಬಸ್‌ನಿಲ್ದಾಣ ಬಳಿ ಸರ್ವೇ ಕಾರ್ಯ ನಡೆಯಿತು ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ಮಾತನಾಡಿ. ಸುಮಾರು ವರ್ಷದಿಂದ (ಗಂಗಾವತಿ ಬೈಪಾಸ್) ಹೈಕೋರ್ಟ್ ಪೀಠದ, ನ್ಯಾಯಾಲಯದ ಆದೇಶದಂತೆ ಭೂಸ್ವಾಧೀನಪಡಿಸಿಕೊಂಡ ಸ್ಥಳದಲ್ಲಿಯೇ ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳ ವಾದಿಗಳು ಸಹ ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ನ್ಯಾಯಾಲಯದಿಂದ ಕಮಿಷನರ್ ಆಗಿ ನೇಮಕಗೊಂಡ ಹೊಸಪೇಟೆಯ ಭೂದಾಖಲೆಗಳ ಸಹಾಯಕ ನಿರ್ದೇಶಕ ಮಂಜೇಶ್ ಸರ್ವೇ ಕಾರ್ಯ ಮಾಡಿದರು. ಸರ್ವೇಯರ್‌ಗಳಾದ ಮಹಾಂತೇಶ್, ಪ್ರವೀಣ್, ಮೋಹನ್, ತಹಸೀಲ್ದಾರ್ ಗೌಸಿಯಾಬೇಗಂ, ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಬಳ್ಳಾರಿ ಡಿಯುಡಿಸಿ ಎಇಇ ಎಂ.ನಾಗನಾಥ್, ಪಿಡಬ್ಲ್ಯೂಡಿ ಎಇಇ ಕಿಶೋರ್‌ಕುಮಾರ್, ಕೆಎಸ್‌ಆರ್‌ಟಿಸಿ ಎಇಇ ಜಗನ್ನಾಥ ಸೇರಿ ಪುರಸಭೆ, ಕಂದಾಯ, ಸರ್ವೇ ಕಚೇರಿಯ ಸಿಬ್ಬಂದಿಗಳಿದ್ದರು.