ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಬಳ್ಳಾರಿ 23: ನಗರದ 19ನೇ ವಾರ್ಡಿನ ಸತ್ಯನಾರಾಯಣ ಪೇಟೆ ಮುಖ್ಯರಸ್ತೆಯಲ್ಲಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು 14ನೇ ಹಣಕಾಸು ಯೋಜನೆ ಅಡಿಯಲ್ಲಿ, 25ಲಕ್ಷ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಭೂಮಿ ಪೂಜೆ ಮಾಡುವುದರ ಮೂಲಕ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಡಾ.ಕೆ.ಎಸ್.ಅಶೋಕ್ ಕುಮಾರ್, ಶ್ರೀನಿವಾಸ್ ಮೋತ್ಕರ್, ಮಹಾನಗರ ಪಾಲಿಕೆ ಸಿಬ್ಬಂದಿಗಳಾದ ಖಾಜಾ ಮೈನುದ್ದಿನ್, ಫಿರೋಜ್, ನವೀನ್ ಕುಮಾರ್ ಹಾಗೂ ವಾರ್ಡಿನ ಪ್ರಮುಖರು ಉಪಸ್ಥಿತರಿದ್ದರು.