ಮುಂದಗೋಡ

ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಲಕ್ಷ್ಮೀ

ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಲಕ್ಷ್ಮೀ

ಲೋಕದರ್ಶನ ವರದಿ 

ಮುಂಡಗೋಡ:ತಾಲೂಕಿನ ಇಂದೂರ ಕೊಪ್ಪ ಗ್ರಾಮದ ಲಕ್ಷ್ಮೀ ಕಪ್ಪತ್ತಮಠ 2019-22ನೇ ಸಾಲಿನ ಬಿಇ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉತ್ತಮ ಅಂಕ ಪಡೆದು ಚಿನ್ನದ ಪದಕ ಪಡೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ.  

ರಾಜಕುಮಾರ-ರೇಣುಕಾ ದಂಪತಿ ಪುತ್ರಿಯಾದ ಲಕ್ಷ್ಮೀ ಧಾರವಾಡದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಕಳೆದ 3 ವರ್ಷಗಳಿಂದ ಸಿವಿಲ್ ವಿಭಾಗದಲ್ಲಿ ಅಧ್ಯಯನ ನಡೆಸಿ ಶೇ.94.7 ಅಂಕಗಳನ್ನು ಗಳಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾಳೆ. ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಸಿವಿಲ್ ವಿಭಾಗದಲ್ಲಿ ಶೇ.85 ಅಂಕಗಳನ್ನು ಗಳಿಸಿದ್ದಳು ಹಾಗೂ ಡಿಪ್ಲೊಮಾ ಸಿಇಟಿ ರಾ​‍್ಯಂಕಿಂಗ್‌ನಲ್ಲಿ 644 ಅಂಕಗಳನ್ನು ಪಡೆದಿದ್ದಳು. ಲಕ್ಷ್ಮೀ ಸಾಧನೆಗೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು, ಸಿಬ್ಬಂದಿ, ಅವಳ ತಂದೆ-ತಾಯಿ ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ