ಬಳ್ಳಾರಿ

ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಹೋತ್ಸವ

ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಹೋತ್ಸವ

ಕಂಪ್ಲಿ 11:  ಶರನ್ನವರಾತ್ರಿ ಸಂದರ್ಭದಲ್ಲಿ ಭಕ್ತಿಯಿಂದ ಪುರಾಣ ಪರಾಯಣ ಮಾಡಿದಲ್ಲಿ ಸಕಲ ಸಂಕಷ್ಟಗಳಿಂದ ಪಾರಾಗಬಹುದು ಎಂದು ಇಲ್ಲಿನ ಶ್ರೀ ಬೋನಿ ಪಾಡುರಂಗಚಾರ್‌ಹೇಳಿದರು.  

ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಲಕ್ಷೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಶರನ್ನವರಾತ್ರಿ ನಿಮಿತ್ತ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಹೋತ್ಸವ ಮತ್ತು ವಿಶೇಷವಾಗಿ ಧಾರ್ಮಿಕ ಕಾರ್ಯಕ್ರಮ ಜರುಗಿದವು ಬೆಳಿಗ್ಗೆ ಮಹಾಭಿಷೇಕ, ಅಷ್ಟೋತ್ತರ, ಮೃತ್ಯುಂಜಯ ಹೋಮ, ಜರುಗಿದವು. ಲಕ್ಷ್ಮಿನಾರಾಯಣ ಪ್ರತಿಮೆಗಳನ್ನು ಫಲಪುಷ್ಪ, ತುಳಸಿಮಾಲೆಗಳಿಂದ ಅಲಂಕರಿಸಲಾಗಿತ್ತು. ಸಕಲ ಸದ್ಭಕ್ತರಿದ್ದರು.ವಾಸವಿ ಕಲ್ಯಾಣ ಮಂಟಪದಲ್ಲಿ ದಾಸೋಹ ನಡೆಯಿತು 


ಸುದ್ದಿ ಓದಿ