ಮನರಂಜನೆ

ಈ ವಾರ ಪ್ರೇಕ್ಷಕರಿಗೆ ‘ಲಡ್ಡು’

ಈ ವಾರ ಪ್ರೇಕ್ಷಕರಿಗೆ ‘ಲಡ್ಡು’

ಬೆಂಗಳೂರು, ಜ 19: ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಚಿತ್ರ ‘ಲಡ್ಡು’ ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹೊಸಬರ ವಿಭಿನ್ನ ಪ್ರಯತ್ನವಾದ ಈ ಚಿತ್ರಕ್ಕೆ ಆರ್.ರಮಾನಂದ್ ಆ್ಯಕ್ಷನ್ ಕಟ್ ಹೇಳಿದ್ದು, ಐವರು ಯುವಕರು ಹಾಗೂ ಒಬ್ಬ ಯುವತಿಯ ಸುತ್ತ ನಡೆಯುವ ಘಟನೆಗಳನ್ನು ಒಳಗೊಂಡಿದೆ.   ಈಗಾಗಲೇ ವೈರಲ್ ಆಗಿರುವ ಟ್ರೈಲರ್ ಚಿತ್ರದ ಮೇಲಿನ ಭರವಸೆಯನ್ನು ಹೆಚ್ಚಿಸಿದೆ. ಇದೇ ಮೊದಲಬಾರಿಗೆ ಮೇಘನಾ ವಿ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.   ಹರ್ಷಿತ್, ನವೀನ್, ಸಮೀರ್ ನಗರದ್, ಮಧು ಮತ್ತು ವಿಶಾಲ್ ಐವರು ನಾಯಕರಾಗಿ, ಬಿಂದುಶ್ರೀ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ  ಪಾರು ಖ್ಯಾತಿಯ ಪವಿತ್ರಾ ಬಿ. ನಾಯಕ್, ಮಂಜುಳಾ ರೆಡ್ಡಿ, ರಾಕ್‍ಲೈನ್ ಸುಧಾಕರ್ ಬಣ್ಣ ಹಚ್ಚಿದ್ದಾರೆ. ಮೂರು ಹಾಡುಗಳಿಗೆ ನಂದು ತಿಪ್ಪು ಸಂಗೀತ ಸಂಯೋಜನೆ ಮಾಡಿದ್ದು, ಪುರುಷೋತ್ತಮ್ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ. ನಿಖಿಲ್ ಸಂಭಾಷಣೆ ರಚಿಸಿದ್ದಾರೆ. 

  


ಸುದ್ದಿ ಓದಿ