ಮುಂದಗೋಡ

ಶ್ರೀಮಾರಿಕಾಂಬಾ ದೇವಿ ವಿಜೃಂಭಣೆಯ ಕುಂಭೋತ್ಸವ

ಶ್ರೀಮಾರಿಕಾಂಬಾ ದೇವಿ ವಿಜೃಂಭಣೆಯ ಕುಂಭೋತ್ಸವ

ಲೋಕದರ್ಶನ ವರದಿ   

ಮುಂಡಗೋಡ: ತಾಲೂಕಿನ ಕಾತೂರ ಗ್ರಾಮದಲ್ಲಿ ಶ್ರೀಮಾರಿಕಾಂಬಾ(ದ್ಯಾಮವ್ವ)ದೇವಿ ಕುಂಭಾಭಿಷೇಕ ಧಾರ್ಮಿಕ ಕಾರ್ಯ ಮಂಗಳವಾರ ವಿಜೃಂಭಣೆಯಿಂದ ಜರುಗಿತು. 

ಶ್ರೀದೇವಿಗೆ ಹೋಮ ಹವನ ಕಾರ್ಯಕ್ರಮಗಳು ವಿಧಿ-ವಿಧಾನಗಳೊಂದಿಗೆ ಜರುಗಿದವು. ನಂತರ ಬಾಜಾ ಭಜಂತ್ರಿಯೊಂದಿಗೆ ಕುಂಭೋತ್ಸವ ಜರುಗಿತು. ದೇವಿಯ ದೇವಸ್ಥಾನದಿಂದ ಹೊರಟ ಕುಂಭೋತ್ಸವದಲ್ಲಿ ಸುಮಾರು 400 ಕುಂಭಗಳನ್ನು ಹೊತ್ತ ಮುತ್ತೈದೆಯರು ಹಾಗು ಯುವತಿಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿದರು. 400 ಕುಂಭಗಳ ಜಲದಿಂದ ಶ್ರೀದೇವಿಗೆ ಅಭಿಷೇಕ ಪೂಜೆ ಮಾಡಲಾಯಿತು. ನಂತರ ಧಾರ್ಮಿಕ ಕಾರ್ಯಗಳು ಜರುಗಿ ಶ್ರೀಅಮ್ಮನವರಿಗೆ ಉಡಿ ತುಂಬುವ ಕಾರ್ಯ ನಡೆಯಿತು. ಪೂಜಾ ಕೈಂಕರ್ಯಗಳನ್ನು ಹನುಮಾಪುರ ಕಾಳಿಕಾಮಠದ ಶ್ರೀಗಳಾದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನಡೆಸಿಕೊಟ್ಟರು. ಮಧ್ಯಾಹ್ನ ಶ್ರೀಮಾರಿಕಾಂಬಾ ಭಕ್ತರಿಗೆ ಅನ್ನಸಂತರೆ​‍್ಣ ಏರಿ​‍್ಡಸಲಾಗಿತ್ತು. ದೇವಿಯ ದರ್ಶನ ಪಡೆಯಲು ಬಂದ ಭಕ್ತರು ಅನ್ನಸಂತರೆ​‍್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿ ಪ್ರಸಾದ ಸ್ವೀಕರಿಸಿದರು.   

ಅಕ್ಕ-ಪಕ್ಕ ಗ್ರಾಮದ ಭಕ್ತರು ಸೇರಿದಂತೆ ಬಿಜೆಪಿ ಮುಖಂಡ ವಿವೇಕ ಹೆಬ್ಬಾರ,  ಕಾಂಗ್ರೆಸ್ ಮುಖಂಡರಾದ ವ್ಹಿ.ಎಸ್‌.ಪಾಟೀಲ, ಕೃಷ್ಣ ಹಿರೇಹಳ್ಳಿ, ಎಚ್‌.ಎಂ.ನಾಯ್ಕ ದೇವಿ ದರ್ಶನ ಪಡೆದರು. ದೇವಿಯ ಧಾರ್ಮಿಕ ಕಾರ್ಯಗಳ ಉಸ್ತುವಾರಿಯನ್ನು ದೇವಸ್ಥಾನದ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಅಜ್ಜಪ್ಪ ಕಡಬಗೇರಿ, ಸದಸ್ಯರು ಮತ್ತು ಗ್ರಾಮಸ್ಥರು ವಹಿಸಿಕೊಂಡಿದ್ದರು.  

ಈ ಸಂದರ್ಭದಲ್ಲಿ ರಮೇಶ ಆಚಾರಿ, ಶಿವಾಜಿ ಶಿಂಧೆ, ನಾಗೇಂದ್ರ ಕಲಾಲ, ನಿತಿನ ರಾಯ್ಕರ, ಸಂತೋಷ ವಾಸನ, ಅಜ್ಜಪ್ಪ ಬಾಗಿಲದರ, ನಾಗೇಂದ್ರ ದ್ಯಾಮಣ್ಣನವರ, ಸುರೇಶ ಬಾಗಿಲದವರ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ