ತಾಳಿಕೋಟಿ

ಪ್ರವೀಣ ರಡ್ಡಿಗೆ ಸನ್ಮಾನ

ಪ್ರವೀಣ ರಡ್ಡಿಗೆ ಸನ್ಮಾನ

ತಾಳಿಕೋಟಿ: ಯೂಟ್ಯೂಬ್ ಸುದ್ದಿ ವಾಹಿನಿ (ಖ9)ಯ ತಾಲೂಕಾ ವರದಿಗಾರ ಪ್ರವೀಣ ರಡ್ಡಿಗೆ ಅವರ ಸೃಜನಶೀಲತೆ ಹಾಗೂ ನಿಸ್ಪಕ್ಷಪಾತ ವರದಿಗಾಗಿ ಗುಂಡಕನಾಳ ಅಂಬೇಡ್ಕರ ಸಮಾಜದ ಯುವ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕ್ರಿಯಾಶೀಲ ವರದಿಗಾರರಾಗಿರುವ ಪ್ರವೀಣ ರಡ್ಡಿ ಅವರು ತಮ್ಮ ದಿಟ್ಟ ಹಾಗೂ ನಿಷ್ಠೂರತೆಯ ವರದಿಗಾಗಿ ಇಡೀ ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಹೆಸರುವಾಸಿಯಾಗಿದ್ದಾರೆ.  

ವರದಿಗಾರಿಕೆಯ ಜೊತೆಗೆ ಉತ್ತಮ ಸಮಾಜ ಸೇವಕ ಆಗಿರುವ ಇವರು ಈಗಾಗಲೇ ಹಲವಾರು ಸಂಘ-ಸಂಸ್ಥೆಗಳೊಂದಿಗೆ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಯಾರೇ ಸಂಕಷ್ಟದಲ್ಲಿದ್ದರೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಹೃದಯ ವೈಶಾಲ್ಯತೆಯನ್ನು ಹೊಂದಿರುವ ರಡ್ಡಿ ಅವರು ನೂರಾರು ಯುವಕರಿಗೆ ಮಾದರಿಯಾಗಿದ್ದಾರೆ. ಯಾವುದೇ ಅಹಂ ಇಲ್ಲದ ಸರಳ ವ್ಯಕ್ತಿತ್ವವನ್ನು ಹೊಂದಿರುವ ಈ ಯುವ ವರದಿಗಾರರ ಈ ಎಲ್ಲ ಕ್ರೀಯಾಶೀಲ ಕಾರ್ಯಗಳನ್ನು ಗುರುತಿಸಿ ತಾಲೂಕಿನ ಗುಂಡಕನಾಳ ಗ್ರಾಮದ ಅಂಬೇಡ್ಕರ ಯುವ ಸಮಿತಿಯು ಅವರನ್ನು ಸನ್ಮಾನಿಸಿ ಗೌರವಿಸಿದೆ. 


ಸುದ್ದಿ ಓದಿ