ಅಭ್ಯರ್ಥಿಯಾಗಿ ಕೃಷ್ಣವೇಣಿ ನಾಮಪತ್ರ ಸಲ್ಲಿಕೆ
ಬಳ್ಳಾರಿ 12: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ತಿಂಗಳು 27ರಂದು ನಡೆಯುವ ನಗರದ 16ನೇ ವಾರ್ಡ್ನಿಂದ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಕೃಷ್ಣವೇಣಿ ಇವರು ಜೆಡಿಎಸ್ ಪಕ್ಷದ ಮುಖಂಡರು ಮತ್ತು ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾ ಪಂಚಾಯತ್ ಕಛೇರಿಗೆ ತೆರಳಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳಾದ ಮೀನಳ್ಳಿ ತಾಯಣ್ಣ, ಮುನ್ನಾಭಾಯ್, ವಿಜಯ್ಕುಮಾರ್, ಕೋಮಲಾ, ಪುಷ್ಪಾ, ರಾಮೇಶ್ವರಿ, ವಿಜಯಕುಮಾರಿ, ವಕೀಲ ಮತ್ತು ಎಂ ಗೋಪಾಲ ಕೃಷ್ಣ, ಶ್ರೀರಾಮುಲು, ಪಿ. ಬಾಬು, ವಾದಿರಾಜ್, ಯಲ್ಲನಗೌಡ, ಸೇರಿದಂತೆ ಪಕ್ಷದ ವಿವಿಧ ಮುಖಂಡರು ಮತ್ತು ಸದರಿ ವಾರ್ಡ್ನ ಹಲವಾರು ಕಾರ್ಯಕರ್ತರಿದ್ದರು.