ಧಾರವಾಡ - ಹುಬ್ಬಳ್ಳಿ

ಕ್ರೀಡೆಯಲ್ಲಿ ಜೆಎಸ್‌ಎಸ್ ಸಿಬಿಎಸ್‌ಇ ಶಾಲಾ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಕ್ರೀಡೆಯಲ್ಲಿ ಜೆಎಸ್‌ಎಸ್ ಸಿಬಿಎಸ್‌ಇ ಶಾಲಾ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
Krīḍeyalli je'eses sibi'esi śālā vidyārthigaḷa gamanār'ha sādhane

ಲೋಕದರ್ಶನ ವರದಿ 

  

ಕ್ರೀಡೆಯಲ್ಲಿ ಜೆಎಸ್‌ಎಸ್ ಸಿಬಿಎಸ್‌ಇ ಶಾಲಾ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ  

ಹುಬ್ಬಳ್ಳಿ 12: ನಗರದ ಜೆಎಸ್‌ಎಸ್   ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಯಚೂರಿನ ಫೆಡರಲ್ ಪಬ್ಲಿಕ್ ಶಾಲೆಯ ಆತಿಥ್ಯದಲ್ಲಿ ಆಗಸ್ಟ್‌ 25ರಿಂದ 30ರವರೆಗೆ ನಡೆದ ಬಿಎಸ್‌ಇ ಕ್ಲಸ್ಟರ್ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. 400 ಮೀಟರ್ ಓಟದ ಸ್ಪರ್ಧೆಯಲ್ಲಿ ಓಮರ್ ಶೇಖ್ ದ್ವಿತೀಯ ಸ್ಥಾನ ಪಡೆದು ಸಿಬಿಎಸ್‌ಇ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಕೃತಿಕ್ ಮೊರಬ 1500 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಹುಬ್ಬಳ್ಳಿಯ ಜಿಮ್ಖಾನಾ ಕ್ಲಬ್ನಲ್ಲಿ ಆಗಸ್ಟ್‌ 29 ಮತ್ತು 30ರಂದು ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.  

ಅಂಡರ್‌-19 ಬ್ಯಾಡ್ಮಿಂಟನ್ ಸಿಂಗಲ್ಸ್‌ ವಿಭಾಗದಲ್ಲಿ ಸಿದ್ಧಾಂತ್ ಓಕಡೆ ರನ್ನರ್‌ಅಪ್ ಸ್ಥಾನ ಪಡೆದರೆ, ಯುತಿಕಾ ಕ್ಯಾಂಪಾಪುರಮಠ ತೃತೀಯ ಸ್ಥಾನ ಪಡೆದಿದ್ದಾರೆ. ಡಬಲ್ಸ್‌ ವಿಭಾಗದಲ್ಲಿ ಯುತಿಕಾ ಕ್ಯಾಂಪಾಪುರಮಠ ಹಾಗೂ ಸಿದ್ಧಾಂತ್ ಓಕಡೆ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್, ಆಡಳಿತಾಧಿಕಾರಿ ಅರಿಹಂತ ಪ್ರಸಾದ್,   ಮಹಾವೀರ ಉಪಾಧ್ಯಾಯ ಹಾಗೂ ಪ್ರಾಚಾರ್ಯೆ ಪ್ರೇರಣಾ ಪಾತ್ರ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ