ನಾಳೆಯಿಂದ ‘ಕೋಟಿಗೊಬ್ಬ’ ಭರ್ಜರಿ ಪ್ರದರ್ಶನ: ಕಿಚ್ಚ ಸುದೀಪ್
ಬೆಂಗಳೂರು, ಅ. 14: ಕೆಲ ವಿತರಕರ ಷಡ್ಯಂತ್ರದಿಂದಾಗಿ ಇಂದು ‘‘ಕೋಟಿಗೊಬ್ಬ’ ಬಿಡುಗಡೆಯಾಗಲಿಲ್ಲ. ಆದರೆ ನಾಳೆಯಿಂದ ಚಿತ್ರ ಖಂಡಿತವಾಗಿಯೂ ಭರ್ಜರಿ ಪ್ರದರ್ಶನ ಕಾಣಲಿದೆ ಎಂದು ನಟ ಸುದೀಪ್ ವಿಶ್ವಾಸ ವ್ಯಕ್ತಪಡಿಸಿದ್ದರೆ.
ಸೂರಪ್ಪಬಾಬು ಅವರು ಕ್ಷಮೆ ಯಾಚಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸುದೀಪ್, ಈ ಬಗೆಯ ಅಡಚಣೆಗೆ ಯಾರು ಕಾರಣ ಎಂಬುದು ಗೊತ್ತಾಗಿದೆ. ಕಾಲವೇ ಅವರಿಗೆ ಪಾಠ ಕಲಿಸಲಿದೆ. ಆದರೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ನವರಾತ್ರಿಯ ಆಯುಧಪೂಜೆಯ ಸಂಭ್ರಮದಂದು ‘ಕೋಟಿಗೊಬ್ಬ’ ವೀಕ್ಷಿಸುವ ಉತ್ಸಾಹದಲ್ಲಿದ್ದ ಕಿಚ್ಚನ ಅಭಿಮಾನಿಗಳು ಗರಂ ಆಗಿ, ಇದೀಗ ಚಿತ್ರತಂಡ ಕ್ಷಮೆ ಕೋರಿದ್ದರಿಂದ ತಣ್ಣಗಾಗಿದ್ದಾರೆ. ಹಾಗೂ ನಾಳೆ ಬೆಳಗ್ಗೆ 6 ಗಂಟೆಯ ಪ್ರದರ್ಶನ ವೀಕ್ಷಿಸಲು ಸಜ್ಜಾಗಿದ್ದಾರೆ.