ಚಿಕ್ಕೋಡಿ

ಚಿಕ್ಕೋಡಿ ಸಾರಿಗೆ ವಿಭಾಗ ಸಂಪೂರ್ಣ ಸ್ತಬ್ಧ: ಪ್ರಯಾಣಿಕರು ಹೈರಾಣ

ಚಿಕ್ಕೋಡಿ ಸಾರಿಗೆ ವಿಭಾಗ ಸಂಪೂರ್ಣ ಸ್ತಬ್ಧ: ಪ್ರಯಾಣಿಕರು ಹೈರಾಣ

ಚಿಕ್ಕೋಡಿ 8: ವಿವಿಧ ಬೇಡಿಕೆಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಎರಡನೆ ದಿನಕ್ಕೆ ಮುಂದುವರೆದಿದೆ. ಹೀಗಾಗಿ ಚಿಕ್ಕೋಡಿ ಸಾರಿಗೆ ವಿಭಾಗ ಗುರುವಾರ ಸಂಪೂರ್ಣ ಸ್ತಬ್ಧಗೊಂಡಿದೆ. ಕೆಎಸ್‍ಆರ್‍ಟಿಸಿ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ ಎಂದು ಆಗ್ರಹಿಸಿ ಸಾರಿಗೆ ಸಿಬ್ಬಂದಿಗಳು ಇಡೀ ರಾಜ್ಯಾದ್ಯಂತ  ಬುಧವಾರದಿಂದ ಮುಷ್ಕರ ಆರಂಭವಾಗಿದೆ. ಇದರಿಂದ ಚಿಕ್ಕೋಡಿ ಭಾಗದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ. ನೆತ್ತಿ ಸುವ ಬಿಸಿಲಿನ ಪ್ರಖರತೆ ಮಧ್ಯದಲ್ಲಿಯೂ ಸಾರಿಗೆ ಸೇವೆ ನಿಂತುಕೊಂಡಿದ್ದರಿಂದ ಪ್ರಯಾಣಿಕರು ಕಳೆದ ಎರಡು ದಿನಗಳಿಂದ ಹೈರಾಣಾಗುತ್ತಿದ್ದಾರೆ. ಚಿಕ್ಕೋಡಿ ವಿಭಾಗದಲ್ಲಿ ಬುಧವಾರ 42 ಟ್ರಪ್‍ನಷ್ಟು ಬಸ್ ಸಂಚಾರ ಮಾಡಿದ್ದವು.

ಆದರೆ ಗುರುವಾರ ಒಂದು ಬಸ್ ರಸ್ತೆಗಿಳಿದಿಲ್ಲ, ಇದರಿಂದ ಪ್ರಯಾಣಿಕರು ಖಾಸಗಿ ವಾಹನಗಳ ಮೋರೆ ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಗುರುವಾರ ಚಿಕ್ಕೋಡಿ ವಾರದ ಸಂತೆ ಇರುವುದರಿಂದ ಗ್ರಾಮೀಣ ಪ್ರದೇಶದ ಜನ ಚಿಕ್ಕೋಡಿಯತ್ತ ಸುಳಿಯಲಿಲ್ಲ, ಹೀಗಾಗಿ ಜನರಿಂದ ತುಂಭಿ ತುಳುಕುತ್ತಿದ್ದ ಚಿಕ್ಕೋಡಿ ನಗರ ಜನರಿಲ್ಲದೆ ಮಾರುಕಟ್ಟೆ ಬಣಗೂಡುತ್ತಿತ್ತು. ಖರೀದಿ ಮಾಡುವ ಗ್ರಾಹಕರೇ ಇಲ್ಲವಾಗಿದ್ದರಿಂದ ವ್ಯಾಪಾರಸ್ಥರು ಮಧ್ಯಾಹ್ನದ ಹೊತ್ತಿಗೆ ಗಂಟುಮುಟೆ ಕಟ್ಟಿಕೊಂಡು ಮನೆಯತ್ತ ಹೋಗುವುದು ಸಾಮಾನ್ಯವಾಗಿತ್ತು.ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದ ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು, ಮಹಿಳೆಯರು, ವೃದ್ಧರಿಂದ ತುಂಬುತ್ತಿದ್ದ ನಿಲ್ದಾಣ ಜನರಿಲ್ಲದೇ ಬೀಕೋ ಎನ್ನುತ್ತಿತ್ತು. ಸಾರಿಗೆ ಸಿಬ್ಬಂದಿಗಳನ್ನು ಹೊರತು ಪಡಿಸಿದರೇ ಒಬ್ಬರು ಪ್ರಯಾಣಿಕರು ಬಸ್ ನಿಲ್ದಾಣದ ಕಡೆ ಸುಳಿಯಲ್ಲಿ, ಮುಷ್ಕರದಲ್ಲಿ ನಿರತರಾದ ಸಾರಿಗೆ ಸಿಬ್ಬಂದಿಗಳು ಬಸ್ ನಿಲ್ದಾಣದ ಕಡೆ ಮುಖ ಮಾಡಲಿಲ್ಲ, ಹೀಗಾಗಿ ಮೊದಲ ದಿನಕ್ಕಿಂತ ಎರಡನೆ ದಿನವೂ ಸಾರಿಗೆ ಸೇವೆ ಸಂಪೂರ್ಣ ನಿಂತುಹೋಗಿತ್ತು.

ಸುದ್ದಿ ಓದಿ