ಮುಂದಗೋಡ

ಇಂದಿನಿಂದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿ

ಇಂದಿನಿಂದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿ

ಮುಂಡಗೋಡ 05: ಕರ್ನಾಟಕದಲ್ಲಿ ಪ್ರಥಮ ಭಾರಿಗೆ ಪ್ರಿಮಿಯರ್ ಲೀಗ್ ಮಾದರಿಯ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಯನ್ನು ಮುಂಡಗೋಡ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮುಂಡಗೋಡ ಮಾರಿಕಾಂಬಾ ಸ್ಪೋರ್ಟ್ಸ ಕ್ಲಬ್ ಮುಖ್ಯಸ್ಥ ಮಾರುತಿ ಓಂಕಾರ ಹೇಳಿದರು.

ಶುಕ್ರವಾರ ಇಲ್ಲಿಯ ಕಾಂಟ್ರಿಕ್ಸ್ ಗ್ರೂಪ್ ಸಭಾಂಗಣದಲ್ಲಿ ಈ ವಿಷಯ ತಿಳಿಸಿದ ಅವರು, ಮಾರ್ಚ 6 ಹಾಗೂ 7 ರಂದು 2 ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯಲ್ಲಿ 18 ಜನ ರಾಷ್ಟ್ರೀಯ ಖೋ ಖೋ ಕ್ರೀಡಾಪಟು ಹಾಗೂ 24 ಜನ ವಿಶ್ವ ವಿದ್ಯಾಲಯದ ಖೋ ಖೋ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 6 ತಂಡಗಳು ಸ್ಪರ್ಧಿಸುತ್ತಿದ್ದು, ದಿನಕ್ಕೆ 15 ರಂತೆ 30 ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು.

ಪರಶುರಾಮ ರಾಣಿಗೇರ, ರಾಘವೇಂದ್ರ ನಾಯ್ಕ, ಶಿವು ಮತ್ತಿಗಟ್ಟಿ, ಮಂಜುನಾಥ ರಾಣಿಗೇರ, ಮಂಜುನಾಥ ಹರಮಲಕರ, ಫಹಿಮ ನಂದಿಕಟ್ಟಿ, ರಮೇಶ ತಳವಾರ, ಜಾನಿ ಪಿಲಿಪ್, ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ