ಕ್ರೀಡೆ

ಖೇಲೋ ಇಂಡಿಯಾ: ಪೂರ್ವ ಸಿದ್ಧತೆ ಬಗ್ಗೆ ಕ್ರೀಡಾಪಟುಗಳು ತೃಪ್ತಿ

ಖೇಲೋ ಇಂಡಿಯಾ: ಪೂರ್ವ ಸಿದ್ಧತೆ ಬಗ್ಗೆ ಕ್ರೀಡಾಪಟುಗಳು ತೃಪ್ತಿ

ಬೆಂಗಳೂರು/ರಾಮನಗರ: ಏಪ್ರಿಲ್ 22: ಏಪ್ರಿಲ್ 24ರಿಂದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಆರಂಭಗೊಳ್ಳುವ ಹಿನ್ನೆಲೆಯಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಇಂದು ಜೈನ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಕನಕಪುರ ರಸ್ತೆಯ ಜೈನ್ ವಿಶ್ವವಿದ್ಯಾಲಯದಲ್ಲಿ 13 ಕ್ರೀಡೆಗಳ ಸ್ಪರ್ಧೆಗಳು ನಡೆಯಲಿದ್ದು ಇಂದು ಸಚಿವ ಡಾ.ನಾರಾಯಣಗೌಡ ಅವರು ಭೇಟಿ ನೀಡಿ ಅಗತ್ಯ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಹೊರ ರಾಜ್ಯಗಳಿಂದ ಬಂದಿರುವ ಕ್ರೀಡಾಪಟುಗಳ ಜೊತೆ ಮಾತುಕತೆ ನಡೆಸಿ, ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಇಲ್ಲಿಯವರೆಗಿನ ವ್ಯವಸ್ಥೆ ಬಗ್ಗೆ ಕ್ರೀಡಾಪಟುಗಳು ತೃಪ್ತಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕ್ರೀಡಾ ಭಾರತೀಯ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಜೈನ್ ವಿವಿ ವೈಸ್ ಚಾನ್ಸಲರ್ ಚೆನ್ನರಾಜ್, SAI ನ ಕಾರ್ಯದರ್ಶಿ ರೋಹಿತ್ ಭಾರದ್ವಾಜ್, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಹಾಜರಿದ್ದರು.

ಸುದ್ದಿ ಓದಿ