ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ : ಸಂಭ್ರಮಾಚರಣೆ
ತಾಳಿಕೋಟೆ21: ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೇಸ್ದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿ,ಖರ್ಗೆ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿರುವ ಲುಂಬಿನಿ ಗಾರ್ಡನದಲ್ಲಿರುವ ಅಂಬೇಡ್ಕರ ಮೂರ್ತಿ ಗೆ ಮಾಲಾರ್ಪಣೆ ಮಾಡಿ ವಿಜಯೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಮಲ್ಲಿಕಾರ್ಜುನ ಖರ್ಗೆ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು. ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಅಲ್ಲಿಂದ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಸಂಬ್ರಮವನ್ನು ಆಚರಿಸಲಾಯಿತು.
ಕಾಂಗ್ರೇಸ್ ಪಕ್ಷದ ಮುಖಂಡ ವಿಜಯಸಿಂಗ ಹಜೇರಿ ಮಾತನಾಡುತ್ತಾ ಪ್ರಾಮಾಣಿಕ ಹಾಗೂ ಪ್ರಬುದ್ದ ರಾಜಕಾರಣಕ್ಕೆ ಹೆಸರಾಗಿರುವ ಮಲ್ಲಿಕಾಜುನ ಖಗರ್ೆಯವರು ಎಐಸಿಸಿ ಅಧ್ಯಕ್ಷರಾಗಿರುವದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇಂತಹ ನಿಷ್ಠಾವಂತ ಅಜಾತಶತ್ರುವಿಗೆ ಹುದ್ದೆ ಸಿಕ್ಕಿರುವದು ಕಾಂಗ್ರೇಸ್ ಪಕ್ಷವನ್ನು ಬಲಿಷ್ಠಗೊಳಿಸಲು ಸಾಧ್ಯವಾಗಲಿದೆ. ಖಗರ್ೆ ಅಧ್ಯಕ್ಷರಾಗಿರುವದರಿಂದ ಮುಂದಿನ ದಿನಗಳಲ್ಲಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕಾಂಗ್ರೇಸ್ ಜೊತೆ ನಿಲ್ಲೋಣ ಎಂದರು.
ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ ಮಾತನಾಡಿ, ಖರ್ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಮುಂದಿನ ದಿನಗಳಲ್ಲಿ ಕನರ್ಾಟಕದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರಲು ಸಾದ್ಯವಾಗಲಿದೆ. ಮುಂದಿನ ಲೋಕಸಭಾ ಚುನಾವಣೆಗೆ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಬೇಕು ಎಂದು ಮನವಿ ಮಾಡಿದರು.
ವಿವಿಧ ದಲಿತ ಪರ ಸಂಘಟನೆಗಳ ಮುಖಂಡ ಮುತ್ತಪ್ಪ ಚಮಲಾಪೂರ, ನಿವೃತ್ತ ಎಸ್ಪಿ ಎಸ್.ಬಿ.ಕಟ್ಟಿಮನಿ, ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ನಾವದಗಿ, ಮುಖಂಡರಾದ ಪ್ರಭುಗೌಡ ಮದರಕಲ್ಲ, ಪುರಸಭೆ ಉಪಾದ್ಯಕ್ಷ ಮುಸ್ತಫಾ ಚೌದ್ರಿ, ಜಿ.ಎಸ್.ಕಶೇಠ್ಟಿ, ಪುರಸಭೆ ಸದಸ್ಯರಾದ ಪರಶುರಾಮ ತಂಗಡಗಿ, ಅಕ್ಕಮಹಾದೇವಿ ಕಟ್ಟಿಮನಿ, ಯಾಸೀನ್ ಮಮದಾಪೂರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ತಿಪ್ಪಣ್ಣ ಸಜ್ಜನ, ಮಲ್ಲರಾವ್ ಕುಲಕರ್ಣಿ , ಬಸನಗೌಡ ಗಬಸಾವಳಗಿ, ಸಂಗನಗೌಡ ಅಸ್ಕಿ ಮಹಿಬೂಬ್ ಕೆಂಭಾವಿ, ರವಿ ಕಟ್ಟಿಮನಿ, ಮಾಳಪ್ಪ ಮಾಳಳ್ಳಿ ಸೇರಿದಂತೆ ಇತರರು ಇದ್ದರು.