ಕೆಸರಟ್ಟಿ ಗ್ರಾಮಸ್ಥರಿಂದ ಶಾಸಕ ಸೋಮನಗೌಡರಿಗೆ ಸನ್ಮಾನ
ತಾಳಿಕೋಟಿ 23: ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರು ಕ್ಷೇತ್ರದಲ್ಲಿ ಮಾಡುತ್ತಿರುವ ಅಭಿವೃದ್ಧಿಪರ ಕಾರ್ಯಗಳನ್ನು ಮೆಚ್ಚಿ ಮತಕ್ಷೇತ್ರದ ಕೆಸರಟ್ಟಿ ಗ್ರಾಮದ ಗ್ರಾಮಸ್ಥರು ಅವರನ್ನು ಸನ್ಮಾನಿಸಿ ಗೌರವಿಸಿದರು.
ಇತ್ತೀಚೆಗೆ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸೋಮನಗೌಡರು ನೀವು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಋಣಿಯಾಗಿರುವೆ ಕೇವಲ ನನ್ನನ್ನು ಸನ್ಮಾನಿಸಿ ಹೊಗಳುವದಕ್ಕಿಂತಲೂ ನನ್ನ ಕರ್ತವ್ಯವನ್ನು ಸದಾ ನೆನಪಿಸುವ ಕೆಲಸ ನೀವು ಮಾಡಬೇಕು. ನಾನು ನಿಮ್ಮ ಸೇವಕನಾಗಿದ್ದು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಇದು ನನ್ನ ಜವಾಬ್ದಾರಿ ಆಗಿದೆ ಎಂದರು.
ಈ ಸಮಯದಲ್ಲಿ ಗ್ರಾಮದ ಗಣ್ಯರಾದ ಬಸನಗೌಡ ಬಿರಾದಾರ, ಮಡಿವಾಳಪ್ಪಗೌಡ ಪಾಟೀಲ, ಪರಶುರಾಮ ನಾಯಕ, ಗ್ರಾ.ಪಂ. ಸದಸ್ಯರಾದ ಬಾಬು ಚವ್ಹಾಣ, ಶಂಕರಗೌಡ ಬಿರಾದಾರ, ಹುಸೇನ ಸೋಲಾಪೂರ, ಮುಖಂಡ ಸಂತುಗೌಡ ನಾಗರಾಳ, ಶರಣಗೌಡ ಬಿರಾದಾರ, ಭೀಮನಗೌಡ ನಾಗರಾಳ, ಮಲ್ಲನಗೌಡ ಬಿರಾದಾರ, ಎಇಇ ತಾರಾನಾಥ ರಾಠೋಡ, ಎಇ ಎ.ಎಚ್. ತುಂಬಗಿ, ಗುತ್ತಿಗೆದಾರ ಎಸ್.ಆರ್. ಸೂಳೆಭಾವಿ, ಅನೀಲ ಇದ್ದರು.