ಕವಿತಾ ಉಳ್ಳಾಗಡ್ಡಿ ಅಧ್ಯಕ್ಷರಾಗಿ ಪುನರಾಯ್ಕೆ
ಮುಂಡರಗಿ 25: ಕಳೆದ ಏಪ್ರಿಲ್ 29ರ ದಿನದಂದು ಆಡಳಿತ ಮಂಡಳಿಯ ಸದಸ್ಯರಿಂದ ಅವಿಶ್ವಾಸಗೊಂಡು ಕೇವಲ 16 ತಿಂಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದ ಕವಿತಾ ಉಳ್ಳಾಗಡ್ಡಿಯವರು ಅವಿಶ್ವಾಸಗೊಂಡ 25 ದಿನಗಳಲ್ಲಿಯೇ ಬಾಕಿ ಉಳಿದ 14 ತಿಂಗಳ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳ್ಳುವದರ ಮೂಲಕ ಮುಂಡರಗಿ ಪುರಸಭೆಯ ಆಡಳಿತದಲ್ಲಿ ಹೊಸ ಇತಿಹಾಸ ಸೃಷ್ಠಿಸಿದ್ದಾರೆ.
ಕಳೆದ ಏಪ್ರಿಲ್ 29 ರಂದು ಆಡಳಿತ ಮಂಡಳಿಯ 20 ಸದಸ್ಯರಿಂದ ಅವಿಶ್ವಾಸಗೊಂಡಿರುವ ಕವಿತಾ ಉಳ್ಳಾಗಡ್ಡಿ. ಆತ್ಮ ವಿಶ್ವಾಸ ಕುಂದದೇ, ಸದಸ್ಯರ ವಿಶ್ವಾಸ ಗಳಿಸಬೇಕು, ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯಬೇಕು ಎಂಬ ದೃಡ ಸಂಕಲ್ಪ ಮಾಡಿದ ಕವಿತಾ ಉಳ್ಳಾಗಡ್ಡಿ, ತಮಗೆ ಅವಿಶ್ವಾಸ ಮಾಡಿದ 20 ಜನ ಸದಸ್ಯರಲ್ಲಿ 9 ಜನ ಸದಸ್ಯರನ್ನು ತನ್ನತ್ತ ವಿಶ್ವಾಸಕ್ಕೆ ತಗೆದುಕೊಳ್ಳುವದರಲ್ಲಿ ಯಶ್ವಸಿಯಾಗಿ 23 ಸದಸ್ಯರಲ್ಲಿ 12 ಜನ ಸದಸ್ಯರನ್ನು ತನ ಪರವಾಗಿ ವಿಶ್ವಾಸಕ್ಕೆ ತಗೆದುಕೊಳ್ಳುವದರೊಂದಿಗೆ ಮೇ24 ರಂದು ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷರಾಗಿ ಆಯ್ಕೆಕೊಳ್ಳುವದರ ಮೂಲಕ ಮುಂಡರಗಿ ಪುರಸಭೆಯ ಇತಿಹಾಸದಲ್ಲಿ ಹಿಂದೆ ಎಂದು ಆಗದಂತ ಹೊಸ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ನೂತನವಾಗಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕವಿತಾ ಉಳ್ಳಾಗಡ್ಡಿ. ಮಾತನಾಡಿ, ಮುಂಡರಗಿ ಮಂಡಳದ ಬಿಜೆಪಿ ಅಧ್ಯಕ್ಷರಾದ ಹೇಮಗೀರೀಶ ಹಾವಿನಾಳರವರ ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಕಳೆದ ತಿಂಗಳು ಅಂದರೆ ಎಪ್ರಿಲ್ 29 ರಂದು ಕೆಲವು ಸದಸ್ಯರನ್ನು ಎತ್ತಿಕಟ್ಟುವದರೊಂದಿಗೆ ನನ್ನ ವಿರುದ್ಧ ಅವಿಶ್ವಾಸ ಮಂಡಿಸಿ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ಆದರೆ ಮುಂಡರಗಿ ಮಂಡಳದ ಬಿಜೆಪಿ ಅಧ್ಯಕ್ಷರ ಪಕ್ಷ ವಿರೋಧಿ ನೀತಿಯಿಂದ ತಾಲೂಕಿನಲ್ಲಿ ಬಿಜೆಪಿ ಪಕ್ಷಕ್ಕೆ ಕಪ್ಪು ಚುಕ್ಕಿ ಬಂದಿತು. ಮುಂಡರಗಿ ಮಂಡಳದ ಬಿಜೆಪಿ ಅಧ್ಯಕ್ಷರ ಒಡೆದಾಳುವ ನೀತಿಯನ್ನು ಅರಿತ ಪುರಸಭೆಯ ಕೇಲವು ಸದಸ್ಯರು ಮರಳಿ ನನಗೆ ಬೆಂಬಲ ನೀಡಿದ್ದಾರೆ. ಆ 12 ಜನ ಸದಸ್ಯರ ಬೆಂಬಲದಿಂದ ಪಕ್ಷದ ಹಿರಿಯ ಮುಖಂಡರ ಶ್ರಮದಿಂದ ಮತ್ತೆ ನಾನು ಉಳಿದ 14 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದೇನೆ.
ಉಳಿದ ಅವಧಿಯನ್ನು ನಾನು ಪುರಸಭೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ನಗರದ ಎಲ್ಲಾ 23 ವಾರ್ಡಗಳ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೆನೆ. ಹಾಗೇ ನನಗೆ ಬೆಂಬಲ ನೀಡಿ ಮತ್ತೆ ಅಧ್ಯಕ್ಷರನ್ನಾಗಿ ಮಾಡಿದಂತಹ ಎಲ್ಲಾ 12 ಜನ ಸದಸ್ಯರ ಹಾಗೂ ತಾಲೂಕಿನ ಬಿ.ಜೆ.ಪಿ ಪಕ್ಷದ ಮುಖಂಡರ ಮತ್ತು ನಗರದ ಹಿರಿಯರ ಮಾರ್ಗದರ್ಶನದಲ್ಲಿ ನಗರದ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮಾಡುತ್ತೆನೆ. ನಾನು ಮಾಡುವ ಕೆಲಸಗಳಿಗೆ ನಗರದ ಜನತೆಯ ಸಹಾಯ, ಸಹಕಾರ ಅವಶ್ಯವಾಗಿದೆ. ಎಂದು ಪುರಸಭೆಯ ಅಧ್ಯಕ್ಷರಾದ ಕವಿತಾ ಉಳ್ಳಾಗಡ್ಡಿ ಹೇಳಿದರು.
ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ತಿಮ್ಮಪ್ಪ ದಂಡಿನ, ನಾಗೇಶ ಹುಬ್ಬಳ್ಳಿ, ಗಂಗಿಮಾಳವ್ವ ಮೋರನಾಳ, ಪವನಕುಮಾರ ಮೇಟಿ, ರುಕ್ಮಣಿ ಸುಣಗಾರ, ಶಿವಾನಂದ ಬಾರಕೇರ, ವೀಣಾದೇವಿ ಸೋನಿ, ರಹಿಮನಸಾಬ ಮಲ್ಲನಕೇರಿ, ಸುಮಾ ಬಳ್ಳಾರಿ, ಶಾಂತವ್ವ ಕರಡಿಕೊಳ್ಳ, ರೀಯಾನಬೇಗಂ ಕೇಲೂರು ಉಪಸ್ಥಿತರಿದ್ದರು.