ಜಮಖಂಡಿ

ಕಾವೇರಿ-2.0 ತಂತ್ರಾಂಶ ಅನುಷ್ಠಾನ ಕಾರ್ಯಕ್ರಮ

ಕಾವೇರಿ-2.0 ತಂತ್ರಾಂಶ ಅನುಷ್ಠಾನ ಕಾರ್ಯಕ್ರಮ

ಲೋಕದರ್ಶನ ವರದಿ,

ಜಮಖಂಡಿ 10: ಕಾವೇರಿ-2.0 ತಂತ್ರಾಂಶ ಅನುಷ್ಠಾನದಿಂದ ಸಾರ್ವಜನಿಕರಿಗೆ ಆಥರ್ಿಕ ವೆಚ್ಚ ಮತ್ತು ಸಮಯದ ಉಳಿತಾಯ ಆಗಲಿದೆ. ಆನ್ಲೈನ್ ನೋಂದಣಿ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ಎಸ್.ಜಿ.ನ್ಯಾಮಗೌಡ ಹೇಳಿದರು.

ನಗರದ ತಾಲೂಕಾಡಳಿತ ಸೌಧ ಆವರಣದಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಹಯೋಗದಲ್ಲಿ ನಡೆದ ನಗರದ ಉಪನೋಂದಣಾಧಿಕಾಗಳು ಮತ್ತು ವಿವಾಹ ನೋಂದಣಾಧಿಕಾರಿ ಕಛೇರಿ ಸಭಾಭವನದಲ್ಲಿ ಕಾವೇರಿ-2.0 ತಂತ್ರಾಂಶ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ಮನೆಯಲ್ಲಿ ಕುಳಿತುಕೊಂಡು ಅರ್ಜಿ ಸಲ್ಲಿಸಲು ಅವಕಾಶವಿದೆ. ಖರೀದಿದಾರರು ತಮ್ಮ ಶುಭ ದಿನದಂದು ಆಸ್ತಿ ಖರೀದಿ ಮತ್ತು ಇತರೇ ವಹಿವಾಟುಗಳಿಗೆ ಅವಕಾಶ ನೀಡಲಾಗಿದೆ.  ಅರ್ಜಿ ಸಲ್ಲಸಿದ ವ್ಯಕ್ತಿಗಳಿಗೆ ಖರೀದಿ ದಿನಾಂಕ ಮುಂಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಸ್ಥಳೀಯ ಉಪನೋಂದಣಾಧಿಕಾರಿ ಕಛೇರಿಗೆ ಆಗಮಿಸುವ ಜನರ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಿಸಲಾಗಿದೆ. ಮಹಿಳೆಯರಿಗೆ ವಿಶ್ರಾಂತಿಗಾಗಿ ಕೊಠಡಿ ವ್ಯವಸ್ಥೆ ಸಹಿತ ಮಹಿಳೆಯರ ಜೊತೆಗಿರುವ ಸಣ್ಣಮಕ್ಕಳಿಗಾಗಿ ಆಟಿಕೆ ವಸ್ತುಗಳನ್ನು ಇಡಲಾಗಿದೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಪ್ರಪಥಮ ಬಾರಿಗೆ ಜಮಖಂಡಿ ಉಪನೋಂದಣಾಧಿಕಾರಿ ಕಛೇರಿಯಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯದಲ್ಲಿ ಮಾದರಿಯಾಗಿದೆ. ರಾಜ್ಯದ ಯಾವುದೇ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಈ ರೀತಿಯ ಸೌಲಭ್ಯಗಳು ಇಲ್ಲ ಎಂದರು.

ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಮಾತನಾಡಿ, ಹೊಸ ತಂತ್ರಾಂಶದಿಂದ ಯಾರಿಗೂ ಮೋಸ ಆಗುವದಿಲ್ಲ. ಕಂದಾಯ ಇಲಾಖೆಯ ಭೂಮಿ ಕೇಂದ್ರ, ನಗರಸಭೆ ಮತ್ತು ಗ್ರಾ.ಪಂ.ಗಳಿಗೆ ನೇರವಾಗಿ ಮಾಹಿತಿ ಲಭ್ಯವಾಗುವ ಹಿನ್ನಲೆಯಲ್ಲಿ ಮೋಸವಾಗುವ ಪರಿಸ್ಥಿತಿ ನಿರ್ಮಾಣಗೊಳ್ಳುವದಿಲ್ಲ. ಕಾವೇರಿ ತಂತ್ರಾಂಶ ಎರಡು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲಿದೆ ಗಣಕೃತಗೊಂಡಿರುವ ಹಿನ್ನಲೆಯಲ್ಲಿ ಮನೆಯಲ್ಲಿ ಕುಳಿತು ಅರ್ಜಿ  ಸಲ್ಲಿಸಬೇಹುದು ಎಂದರು.

ವೇದಿಕೆಯಲ್ಲಿ ಉಪಖಜಾನೆ ಹಿರಿಯ ಅಧಿಕಾರಿ ಎಸ್.ಎಸ್.ಬಿರಾದಾರ, ಉಪನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿ ಮಾರುತಿ ಗದಾಡೆ, ಅಧಿಕಾರಿಗಳಾದ ಪ್ರದೀಪ ಬೆಣ್ಣಿ, ಬಿ.ಎಲ್.ಮಾಸರಡ್ಡಿ, ಹಿರಿಯ ದಸ್ತು ಬರಹಗಾರ ಎಸ್.ಆರ್.ಸಿದ್ದಾರ, ಜಿಲ್ಲಾ ದಸ್ತು ಬರಹಗಾರರ ಸಂಘದ ಅಧ್ಯಕ್ಷ ಬಸವರಾಜ ತೆಲಸಂಗ, ಪ್ರಗತಿಪರ ರೈತರಾದ ಎಂ.ಎಂ.ಒಡೆಯರ, ಬಸಪ್ಪ ಗದಾಡೆ, ಸಹಿತ ಹಲವರು ಇದ್ದರು. ದಸ್ತು ಬರಹಗಾರರಾದ ರಾಜು ಬಂಡಿಗಣಿ ಪ್ರಾರ್ಥಿಸಿದರು. ಎಸ್.ಜಿ.ಗುರ್ಲಾಪೂರ ಸ್ವಾಗತಿಸಿದರು. ಮೋಹನರಾಜ ಸಬರದ ನಿರೂಪಿದರು. ಮಳೆಯಪ್ಪ ಕಂಬಾರ ವಂದಿಸಿದರು.


ಸುದ್ದಿ ಓದಿ