ಮುದ್ದೆಬಿಹಾಲ್

ಕವಡಿಮಟ್ಟಿ: ಅಮೃತ ಸರೋವರದಲ್ಲಿ ವಿಶ್ವ ಯೋಗ ದಿನಾಚರಣೆ

ಕವಡಿಮಟ್ಟಿ: ಅಮೃತ ಸರೋವರದಲ್ಲಿ ವಿಶ್ವ ಯೋಗ ದಿನಾಚರಣೆ

ಮುದ್ದೇಬಿಹಾಳ 22: ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರದಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. 

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಅಮೃತ ಸರೋವರದಲ್ಲಿ 10ನೇ ವಿಶ್ವ ಯೋಗ ದಿನಾಚರಣೆ ಹಮ್ಮಿಕೊಂಡು ಸಾರ್ವಜನಿಕರಿಗೆ, ಶಾಲಾ-ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಯೋಗದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ನಿರ್ದೇಶಕ (ಗ್ರಾ.ಉ.) ಪಿ.ಎಸ್‌. ಕಸನಕ್ಕಿ ತಿಳಿಸಿದರು. 

ಪ್ರತಿನಿತ್ಯ ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ದ್ವಿಗುಣವಾಗಲಿದೆ. ಪ್ರತಿಯೊಬ್ಬರು ದಿನನಿತ್ಯ ಕನಿಷ್ಟ 10 ನಿಮಿಷ್ ಯೋಗ ಮಾಡಬೇಕು. ಸದೃಢ ಆರೋಗ್ಯವಾಗಿರಲು ಯೋಗ ಸಹಕಾರಿಯಾಗಿದ್ದು, ಯುವ ಜನಾಂಗ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.  

ಸರ್ಕಾರಿ ಶಾಲೆ ದೈಹಿಕ ಶಿಕ್ಷಕಿ ಎಸ್‌.ಎಸ್‌.ಕೋರಿ ಅವರು ಯೋಗಸಾನ ಮಾಡಿಸಿದರು. ಶಿಕ್ಷಕಿ ಲಕ್ಷ್ಮೀ ಹಿರೇಮಠ ಯೋಗದ ಮಹತ್ವ ಕುರಿತು ತಿಳಿಸಿದರು. 

ಗ್ರಾ.ಪಂ. ಅಧ್ಯಕ್ಷೆ ಶಕುಂತಲ ಚ. ಹಂಡ್ರಗಲ್, ಸದಸ್ಯರಾದ ಮಲ್ಲಯ್ಯ ಹಿರೇಮಠ, ಹನುಮಂತ ಹಂಡ್ರಗಲ್, ಮಂಕಯ್ಯ ಪೂಜಾರಿ, ಶಾಲಾ ಮುಖ್ಯ ಶಿಕ್ಷಕ ನಿಂಗಪ್ಪ ನಾವದಗಿ, ಎಂಆರ್ ಡ್ಬ್ಯೂ ಈರಯ್ಯ ಹಿರೇಮಠ ಮತ್ತಿತರರು ಇದ್ದರು. 


ಸುದ್ದಿ ಓದಿ