ಭೀಮರಾಜ್ ಸೈನ್ಯ ತಾಲೂಕು ಅಧ್ಯಕ್ಷರಾಗಿ ಕಾಶಿರಾಯ ಬಿರಾದಾರ್ ನೇಮಕ

ಭೀಮರಾಜ್ ಸೈನ್ಯ ತಾಲೂಕು ಅಧ್ಯಕ್ಷರಾಗಿ ಕಾಶಿರಾಯ ಬಿರಾದಾರ್ ನೇಮಕ Kashiraya Biradar appointed as Taluk President of Bhimaraj Sainya

ಲೋಕದರ್ಶನ ವರದಿ 

ದೇವರಹಿಪ್ಪರಗಿ 22 : ಭೀಮರಾಜ ಸೈನ್ಯದ ತಾಲೂಕು ಅಧ್ಯಕ್ಷರಾಗಿ ಪಟ್ಟಣದ ಯುವ ಮುಖಂಡ ಕಾಶಿರಾಯ ಬಿರಾದಾರ ನೂತನವಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಮುಖಂಡರು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಭಿನಂದನೆ ಸಲ್ಲಿಸಿದರು. ನಂತರ ಭೀಮರಾಜ ಸೈನ್ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಬಿಜಾಪುರ ಅವರು ಮಾತನಾಡಿ,  ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸರ್ವ ಧರ್ಮಗಳ ಗೌರವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಿಕೊಂಡು ಸಂಘಟನೆಯನ್ನು ಬಲಪಡಿಸಬೇಕು ಎಂದು ನೂತನ ತಾಲೂಕು ಅಧ್ಯಕ್ಷರಿಗೆ ತಿಳಿಸಿದರು.

ನಮ್ಮ ಸಂಘಟನೆ ಎಲ್ಲ ಧರ್ಮ, ಜಾತಿ ಹಾಗೂ ಸಮುದಾಯದ ಜನರನ್ನು ಸಮಾನವಾಗಿ ಕಾಣುವ ಮೂಲಕ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಏಕತೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ರಾಜ್ಯಾಧ್ಯಕ್ಷರಾದ ಶಿವು ನಾಟಿಕಾರ  ಅವರು ಮಾತನಾಡಿ, ನಮ್ಮ ಸಂಘಟನೆ ಉದ್ದೇಶ ಬಡವ, ಕಾರ್ಮಿಕ, ರೈತ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ. ಅಂಬೇಡ್ಕರ್ರವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಹೇಳಿದರು. ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಭೀಮ ಸೈನ್ಯ ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.