ರಾಜ್ಯ ಸರ್ಕಾರಕ್ಕೆ ಕಣ್ಣು ಕಿವಿ ಬಾಯಿ ಇಲ್ಲದ ಬುದ್ಧಿಮಾಂಧ್ಯ ಸರ್ಕಾರವಾಗಿದೆ: ಕಾಶಪ್ಪನವರ
ಹುನಗುಂದ 01: ಕಳೆದ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಈ ಭಾಗದ ಜನರ 30 ವರ್ಷದ ಬೇಡಿಕೆಯಾಗಿದ್ದ ಕೂಡಲಸಂಗಮ ಅಡಿಹಾಳ ಸೇತುವೆಯನ್ನು 59 ಕೋಟಿ ರೂ ಅನುದಾನದಲ್ಲಿ ಕಾಮಗಾರಿಯನ್ನು ಪ್ರಾರಂಭಗೊಳಿಸಿ ಐದು ವರ್ಷ ಗತಿಸಿದರೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕಣ್ಣು ಕಿವಿ ಬಾಯಿ ಇಲ್ಲದ ಬುದ್ದಿಮಾಂಧ್ಯ ಸರ್ಕಾರವಾಗಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿದರು. ಬಸವನಾಡಿನ ಐತಿಹಾಸಿಕ ಕ್ಷೇತ್ರ ಕೂಡಲಸಂಗಮಕ್ಕೆ ಭೇಟಿ ನೀಡಿ ಕಳೆದ 5-6 ದಿನಗಳಿಂದ ಕೃಷ್ಣೆ ಮತ್ತು ಮಲಪ್ರಭೆ ನದಿಗಳ ಒಳ ಹರಿವು ಹೆಚ್ಚಾಗಿ, ಇದೆ ಸ್ಥಿತಿ ಮುಂದುವರೆದರೆ ಸಂಗಮನಾಥ ಜಲದಿಗ್ಭಂದನವಾಗುವದರಲ್ಲಿ ಸಂದೇಶಹವಿಲ್ಲ ಎಂದು ಕಾಶಪ್ಪನವರ ತಿಳಿಸುತ್ತ ಎರಡು ನದಿ ಪಾತ್ರದಲ್ಲಿರುವ ಗ್ರಾಮಗಳಿಗಾದ ನೆರೆ ವೀಕ್ಷಣೆ ಮಾಡಿದ ಅವರು ಸುಕ್ಷೇತ್ರ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರಿಗೆ ಅನೂಕೂಲವಾಗಲೆಂದು 17 ಕಿ.ಮೀ ಸುತ್ತವರೆಯುವದನ್ನು ತಪ್ಪಿಸಲು ಈ ಸೇತುವೆ ಕಾಮಗಾರಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯನವರ ಸರ್ಕಾರದಿಂದ ಅನುಮೋಧನೆಗೊಳಿಸಿ ಕಾಮಗಾರಿಯನ್ನು ಆರಂಭಿಸಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ ಇದು ನಿದ್ದೆಮಾಡುವ ಬಿಜೆಪಿ ಸರ್ಕಾರದ ವ್ಯವಸ್ತೆ. ಮತ್ತು ಅಡಿಹಾಳದವರೆ ಈ ಸೇತುವೆ ಮುಂದುವರೆಸಬೇಕಿತ್ತು. ಸಧ್ಯ ಸಿಮೇಂಟ್ ಮತ್ತು ಸ್ಟೀಲ್ ಬೆಲೆ ಏರಿಕೆಯಾಗಿದ್ದರಿಂದ ಹೆಚ್ಚುವರಿ ಅನುದಾನ ಅವಶ್ಯತೆ ಇದೆ ಎಂದು ಗುತ್ತಿಗೆದಾರರು ತಿಳಿಸುತ್ತಿದ್ದರೂ ಅದಕ್ಕೆ ಶಾಸಕರು ಮತ್ತು ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಎಂದು ಕಾಶಪ್ಪನವರ ಆರೋಪಿಸಿದರು. ನದಿ ಸೇತುವೆ ನಿರ್ಮಾಣದ 59 ಕೋಟಿ ಅನುದಾನದಲ್ಲೆ ರೂ. 20ಕೋಟಿ ಹಣವನ್ನು ನೀಡದೆ ಸತಾಯಿಸುತ್ತಿರುವುದರಿಂದ ಗುತ್ತಿಗೆದಾರರ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆಂದು ಕಾಶಪ್ಪನವರ ಕಿಡಿಕಾರಿದರು.
ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ತಾಲೂಕಿನ 10 ಗ್ರಾಮಗಳನ್ನು ಯುಕೆಪಿ ಅಡಿಯಲ್ಲಿ ಶಾಶ್ವತ ಮುಳಗಡೆ ಮಾಡಿ ಪುನರ ವಸತಿ ಕೇಂದ್ರಗಳ ಅಭಿವೃದ್ದಿಗೆ 200 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು. ಶಾಸಕ ದೊಡ್ಡನಗೌಡ ಪಾಟೀಲರ ಬೆಂಬಲಿಗರು ಗುತ್ತಿಗೆಯಲ್ಲಿ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದರಿಂದ 10 ಗ್ರಾಮಗಳ ಪುನರ ವಸತಿ ಕೇಂದ್ರಗಳ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಿರ್ಮಾಣವಾಗಿವೆ. ಇನ್ನು ಪುನರ ವಸತಿ ಕೇಂದ್ರಗಳು ಸಿದ್ದಗೊಂಡರೂ ಹಕ್ಕು ಪತ್ರ ನೀಡುವಲ್ಲಿ ವಿಳಂಭ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ಈ ಭಾಗದ ಜನರು ಪದೇ ಪದೇ ಪ್ರವಾಹಕ್ಕೆ ತುತ್ತಾಗಿ ನೋವು ಅನುಭವಿಸುವಂತಾಗಿದೆ. ತಾಲೂಕಿನ 30 ಕ್ಕೂ ಹೆಚ್ಚು ಗ್ರಾಮಗಳ ಜನರು ನೆರೆಯ ಭೀತಿಯಲ್ಲಿ ನೆರಳಾಡುತ್ತಿದ್ದ ಸಂತ್ರಸ್ಥರ ಕಷ್ಟದಲ್ಲಿ ಭಾಗಿಯಾಗದೇ ಈ ಕ್ಷೇತ್ರದ ಶಾಸಕರು ಮಾತ್ರ ಅಧಿಕಾರ ಹಿಂದೆ ಬೆನ್ನತ್ತಿ ತಿರಗಾಡುತ್ತಿದ್ದಾರೆ ಎಂದು ಕಾಶಪ್ಪನವರ ಆರೋಪಿಸಿದರು.
ಹಳೆ ಕೂಡಲಸಂಗಮ ಮುಳಗಡೆಗೊಂಡು ಅನೇಕ ವರ್ಷಗಳೇ ಗತಿಸಿದ್ದು ಇನ್ನು 600 ಕುಟುಂಬಗಳಿಗೆ ಹಕ್ಕು ಪತ್ರ ನೀಡದೇ ಇರೋದರಿಂದ ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುತ್ತಿದ್ದಾರೆ. ಕೃಷ್ಣೆ ಮತ್ತು ಮಲಪ್ರಭೆ ನದಿ ದಡದಲ್ಲಿರುವ ಚೌಡಕಲದಿನ್ನಿ, ವಳಕಲದಿನ್ನಿ, ಚಿತ್ತರಗಿ, ಗಂಗೂರ, ಹಡಗಲಿ, ಬೆಳಗಲ್ಲ, ಮೇದನಾಪೂರ ಸೇರಿದಂತೆ ಒಟ್ಟಾಗಿ ನದಿ ಪಾತ್ರದಲ್ಲಿರುವ 26 ಗ್ರಾಮಗಳು ಪ್ರತಿ ವರ್ಷ ಪ್ರವಾಹ ಭೀತಿಯನ್ನು ಎದುರಿಸುತ್ತಿದ್ದು ಅವುಗಳೂ ಸಹಿತ ಶಾಶ್ವತ ಮುಳಗಡೆಗೆ ಶ್ರಮಿಸಬೇಕಾದ ಶಾಸಕ ದೊಡ್ಡನಗೌಡ ಪಾಟೀಲರು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಬೆನ್ನತ್ತಿ ದೆಹಲಿ ಮತ್ತು ಬೆಂಗಳೂರು ಸುತ್ತುತ್ತಿದ್ದಾರೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವ ಗುಡುಗಿದರು. ಮುಖಂಡ ಗಂಗಾಧರ ದೊಡಮನಿ ಮಾತನಾಡಿ ಕಳೆದ ಒಂದು ವಾರದಿಂದಲೂ ಈ ಭಾಗದ ಜನರು ಊರಿಗೆ ಸಂಪೂರ್ಣ ನೆರೆ ಆವರಿಸುವ ಭೀತಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಈ ಕುರಿತು ಜನಪ್ತಿನಿಧಿಗಳು ಸ್ಥಳಕ್ಕೆ ಆಗಮಿಸಿ ಅವರಿಗೆ ಧೈರ್ಯ ತುಂಬು ಕೆಲಸೌಅಗಬೇಕು, ಜೊತೆಗೆ ಅವರಿಗೆ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಬೇಕೆಂದರು. ಕಳೆದ 2ವರ್ಷದಿಂದ ಬಂದ ನೆರೆಗೆ ಹಾಳಾಗಿ ಜಾನುವಾರು ಮನೆ ಮತ್ತು ಬೆಳೆ ಕಳೆದುಕೊಂಡವರಿಗೆ ಮಾರ್ಗಸೂಚಿಯಂತೆ ಈತನಕ ಸಂತ್ರಸ್ಥರಿಗೆ ಪರಿಹಾರ ಬಂದಿಲ್ಲ. ನೆರೆಗೆ ಹಾಳಾದ ಕುಟುಂಬಳಿಗೆ 1ಲಕ್ಷ ರೂ ಪರಿಹಾರ ಒದಗಿಸಬೇಕೆಂದು ದೊಡಮನಿಯವರು ಸರ್ಕಾರವನ್ನು ಒತ್ತಾಹಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಂಕ್ರ್ಪ ನೇಗಲಿ, ಪುರಸಭೆ ಅಧ್ಯಕ್ಷ ಶರಣು ಬೆಲ್ಲದ, ಮುತ್ತಣ್ಣ ಕಲಗೋಡಿ, ಮಲ್ಲಿಕಾರ್ಜುನ ಹೂಗಾರ, ಮಾಜಿ ಗ್ರಾ.ಪಂ ಅಧ್ಯಕ್ಷ ಬೀಮಪ್ಪ ಯರಝೇರಿ, ಶೇಖರಗೌಡ ಗೌಡರ, ಗಂಗಣ್ಣ ಬಾಗೇವಾಡಿ ಸೇರಿದಂತೆ ಅನೇಕರು ಇದ್ದರು.