ಮನೆ ಮನೆ ಭೇಟಿ ನೀಡಿ ಕಲ್ಪನಾ ಮತಯಾಚನೆ
ಬಳ್ಳಾರಿ 19: ಬಳ್ಳಾರಿ ಮಹಾನಗರಪಾಲಿಕೆ ಚುನಾವಣೆಯಲ್ಲಿ 36ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ. ಕಲ್ಪನಾ ವೆಂಕಟರಾಮಿರೆಡ್ಡಿ ಅವರು ಇಂದು ಹವಂಭಾವಿ ಪ್ರದೇಶದಲ್ಲಿ ಮನೆ ಮನೆ ಭೇಟಿ ನೀಡಿ ಮತ ಯಾಚಿಸಿದರು.
ಇದೇ 27ರಂದು ನಡೆಯುವ ಪಾಲಿಕೆಯ ಅಧಿಕಾರ ಚುಕ್ಕಾಣಿಯನ್ನು ಭಾರತೀಯ ಜನತಾ ಪಕ್ಷ ಹಿಡಿದು ಬಳ್ಳಾರಿಯನ್ನು ಸ್ವಚ್ಛ ಮತ್ತು ಮಾದರಿ ನಗರವನ್ನಾಗಿಸಲು ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಾರ್ಡಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.