ಬೈಲಹೊಂಗಲ

ಕರುನಾಡ ವಿಜಯ ಸೇನೆ ಉದ್ಘಾಟನೆ: ಬೈಕ್ ರ್ಯಾಲಿ

ಕರುನಾಡ ವಿಜಯ ಸೇನೆ ಉದ್ಘಾಟನೆ: ಬೈಕ್ ರ್ಯಾಲಿ

ಬೈಲಹೊಂಗಲ 23: ಕನ್ನಡ ನಾಡು, ನುಡಿ, ಜಲ, ಭಾಷೆ ಹಾಗೂ ಗಡಿ  ಸಂರಕ್ಷಣೆಗೆ ಬದ್ಧರಾಗಬೇಕೆಂದು ನ್ಯಾಯವಾದಿ ಶ್ರೀಶೈಲ ಬೋಳನ್ನವರ ಹೇಳಿದರು.

   ಅವರು ಪಟ್ಟಣದ ಚನ್ನಮ್ಮವೃತ್ತದಲ್ಲಿ  ಚೆನ್ನಮ್ಮ ಆಶ್ವಾರೂಢ ಮೂರ್ತಿಗೆ ಹೂಮಾಲೆ ಹಾಕಿ ಗೌರವ ಸಮಪರ್ಸಿ ನಂತರ ಕರುನಾಡ ವಿಜಯ ಸೇನೆ ನೂತನ ತಾಲೂಕು ಘಟಕ ಉದ್ಘಾಟಿಸಿ, ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

 ಕನ್ನಡಪರ ಸಂಘಟನೆಗಳು ಸದಾ ಕನ್ನಡ ನಾಡಿನ ಏಳ್ಗೆಗಾಗಿ ಹಗಲಿರುಳು ಶ್ರಮಿಸಿ ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಬೈಲಹೊಂಗಲ ಪಟ್ಟಣದಲ್ಲಿ ಕರುನಾಡ ವಿಜಯ ಸೇನೆ ಉದ್ಘಾಟನೆಗೊಂಡಿರುವುದು ಸಂತಸವಾಗಿದೆ. ಮುಂದಿನ ದಿನಮಾನಗಳಲ್ಲಿ ಪ್ರತಿಯೊಂದು ಗ್ರಾಮಮಟ್ಟದಲ್ಲಿ ಶಾಖೆಗಳು ಪ್ರಾರಂಭಗೊಂಡು  ಬೃಹದಾಕಾರವಾಗಿ ಸಂಘಟನೆ ಬೆಳೆಯಲಿ ಎಂದು ಹಾರೈಸಿದರು.

    ಕಾರ್ಯದರ್ಶಿ ಶಿವಪುತ್ರ ಗಾಣದಾಳ,  ಜಿಲ್ಲಾಧ್ಯಕ್ಷ ಸುರೇಶ ಇಟಗಿ, ತಾಲೂಕಾಧ್ಯಕ್ಷ ವಿಠ್ಠಲ ಕಡಕೋಳ ಕರುನಾಡ ವಿಜಯ ಸೇನೆಯ ವತಿಯಿಂದ ಬೆಳಗಾವಿಯಲ್ಲಿ ದಿ.29 ರಂದು ರಾಯಣ್ಣ ಉತ್ಸವ ಅದ್ದೂರಿಯಾಗಿ ಜರುಗಲಿದ್ದು ಈ ನಾಡಿನ ರಾಯಣ್ಣ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರಲ್ಲದೇ ಬೈಲಹೊಂಗಲ ನಾಡಿನಲ್ಲಿ ಕರುನಾಡು ವಿಜಯ ಸೇನೆ ಉದ್ಘಾಟನೆಗೊಂಡಿರುವುದು ಹರ್ಷ ವ್ಯಕ್ತಪಡಿಸಿದರು. 

      ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ,  ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ಯುವಕರು ಕನ್ನಡ ನಾಡು ಕಟ್ಟುವಲ್ಲಿ ಕಂಕಣಬದ್ಧರಾಗಬೇಕು. ಯುವಕರು ದುಶ್ಚಟಗಳಿಂದ ದೂರ ಉಳಿದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಪಣ ತೊಡಲು ಕೆರೆ ನೀಡಿದರು

        ಯುವ ಘಟಕ ರಾಜ್ಯಾಧ್ಯಕ್ಷ ಆರ್ ಎಸ್ ಮಹೇಶ, ಜಿಲ್ಲಾ ಗೌರವ ಅಧ್ಯಕ್ಷ ರವಿ ಭದ್ರಕಾಳಿ, ಬಸವರಾಜ ಯಾಸನ್ನವರ, ಪಾರುಖ  ಅಂಕಲಗಿ, ಪ್ರಭು ಶಿರವಂತಿ, ಆನಂದ ಯರಗಟ್ಟಿ, ಮಂಜುನಾಥ  ಹರಕುಣಿ, ಮಾರುತಿ ಕೊಂಡುರ, ಈರಪ್ಪ ಬೆಳವಡಿ, ಗಂಗಪ್ಪ ಬೆಳವಡಿ, ಅಭಿಷೇಕ್ ಬೋಳನ್ನವರ, ಮಾರುತಿ ನಲವಡೆ ನೂರಾರು ಯುವಕರು ಇದ್ದರು. ಬೈಕ್ ರ್ಯಾಲಿ ಚೆನ್ನಮ್ಮ ವೃತ್ತದಿಂದ ನೂರಾರು ಬೈಕ್ ಸವಾರರು ಇಂಚಲ ಕ್ರಾಸ, ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತಲುಪಿ ರಾಯಣ್ಣನಿಗೆ ಗೌರವ ಸಮರ್ಪಸಲಾಯಿತು 

ಸುದ್ದಿ ಓದಿ