ಶಿರಡಿ ಸಾಯಿ ಬಾಬಾ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ
ಲೋಕದರ್ಶನ ವರದಿ
ಮುಂಡರಗಿ 26: ಸ್ಥಳೀಯ ಶಿರಡಿ ಸಾಯಿ ಬಾಬಾ ದೇವಾಲಯದಲ್ಲಿ ಕಾರ್ತಿಕ ಮಾಸದ ಕೊನೆಯ ದಿನದಂದು ಕಾರ್ತಿಕ ದಿಪೋತ್ಸವ ಜರುಗಿತು.
ಕಾರ್ತಿಕ ದಿಪೋತ್ಸವದ ನಿಮಿತ್ಯ ಬೆಳಿಗ್ಗೆ ದೇವಾಲಯದಲ್ಲಿ ಶ್ರೀ ಶಿರಡಿ ಸಾಯಿ ಬಾಬಾರವರಿಗೆ ಅಭಿಷಕೆ ವಿಶೇಷ ಪೂಜಾ ಅಲಂಕಾರ ಜರುಗಿತು. ಸಂಜೆ ದೇವಾಲಯಕ್ಕೆ ನೂರಾರು ಭಕ್ತರು ಭಾಗವಹಿಸಿ ದೇವಾಲಯದ ಅವರಣದಲ್ಲಿ ಸಾಮೂಹಿಕವಾಗಿ ದೀಪದ ಹಣತೆ ಹಚ್ಚಿ ಸಂಭ್ರಮಿಸಿದರು. ನಂತರ ರಾತ್ರಿ ಪಲ್ಲಕ್ಕಿ ಸೇವೆಯೊಂದಿಗೆ ವೇದಘೋಷಗಳ ನಡುವೆ ದೇವಾಲಯದ ಮುಂಭಾಗದಲ್ಲಿ ಪ್ರಾದಕ್ಷಣೆ ಹಾಕಿದರು. ಈ ವೇಳೆ ಭಕ್ತರು ವಿಶೇಷ ಪೂಜಾ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಆರ್ಚಕ ಜಯಣ್ಣ ಪಾಶಿ, ಸುರೇಶ ಬೋಸ್ಲೆ, ಸಂತೋಷ ಕಪಟಕರ, ನಿಂಗನಗೌಡ ಗೌಡ್ರ, ಚೇತನಾ ಅಂಗಡಿ, ವಿಠಲ ಬೀಸೆ, ರೇಣುಕಾ ವಾಲಿಕಾರ, ದರ್ಶನ ಸಾಸನಮರಿ, ರತ್ನಬಾಯಿ ಕಪಟಕರ, ರುದ್ರೇಶ ಕವಟಿ, ಸಂಜನಾ ಕಪಟಕರ, ಗೋಪಾಲ ಸೂಡಿ, ಬಸವರಾಜ ಹೂಗಾರ, ರಾಘವೇಂದ್ರ ಹೊನ್ನೂರ, ಜಲರಾಮ ತೋನ್ನಿವೂ, ಮಲ್ಲಕಾರ್ಜುನ, ವೀರೇಂದ್ರ ತಾಮ್ರಗುಂಡಿ, ದೇವಪ್ಪ.ಎನ್ ಮುಂತಾದ ಭಕ್ತರು ಪಾಲ್ಗೊಂಡಿದ್ದರು.