ಬಳ್ಳಾರಿ

ಕರವೇ ರಾಜ್ಯ ಮಟ್ಟದ ಪದಾಧಿಕಾರಿಗಳ ಆಯ್ಕೆ

ಕರವೇ ರಾಜ್ಯ ಮಟ್ಟದ ಪದಾಧಿಕಾರಿಗಳ ಆಯ್ಕೆ

ಬಳ್ಳಾರಿ 18: ನಗರದ ಹೊಸಪೇಟೆ ರಸ್ತೆ, ಗುರು ಪಂಕ್ಷನ್ ಹಾಲ್‍ನಲ್ಲಿ ಕರವೇ ಬಳ್ಳಾರಿ ಜಿಲ್ಲಾಧ್ಯಕ್ಷರು ವಿ.ರಾಮಾಂಜಿನೇಯ ನೇತೃತ್ವದಲ್ಲಿ ಕರ್ನಾಟಕ  ರಕ್ಷಣಾ ವೇದಿಕ ರಾಜ್ಯ ಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯಾಧ್ಯಕ್ಷ ಪ್ರವಿಣ್ ಕುಮಾರ್ ಶೆಟ್ಟಿ ಭಾಗವಹಿಸಿ ಚಾಲನೆ ನೀಡಿ ಮಾತನಾಡುತ್ತಾ ರಕ್ಷಣಾ ವೇದಿಕೆಯಿಂದ ರಾಜ್ಯದ ನಾಡು, ನುಡಿ, ನೆಲ, ಜಲ ಹಾಗೂ ರಾಜ್ಯದ ಅಭಿವೃದ್ದಿಗೆ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಡಿಜಿಟಲ್ ಐ.ಡಿ. ಕಾರ್ಡ್, ಕಾರ್ಯಕರ್ತರು 390 ಸದಸ್ಯರು ಮಾಡಿಸಿಕೊಂಡಿರುತ್ತಾರೆ. ಇದೇ ರೀತಿ ರಾಜ್ಯ ಮಟ್ಟದ 50 ಸಾವಿರ ಕಾರ್ಯಕತರಿಗೆ ಡಿಜಿಟಲ್ ಐ.ಡಿ ಕಾರ್ಡ್ ಮಾಡಿಸಿ ಕೊಡಲಾಗುವುದು ಎಂದು ಹೇಳಿದರು. 

ರಾಜ್ಯ ಗಡಿಭಾಗವಾಗಿರುವ ಬಳ್ಳಾರಿ ಜಿಲ್ಲೆ, ಜನರ ಸೇವೆಯಲ್ಲಿ ತಮ್ಮ ಕಾರ್ಯಕರ್ತರು ಮುಂದೆ ಇದ್ದಾರೆ ಎಂದು ಹೆವÉ್ಮುಯಿಂದ ಹೇಳಿದರು. ನಾನು ರಾಜ್ಯಗೌರವಧ್ಯಕ್ಷರಾಗಿರುತ್ತೇನೆÉ. ಉತ್ಸಾಹವಂತ ಯುವಕರು ರಾಜ್ಯಾಧ್ಯಕ್ಷರಿಗೆ ಸೇವೆ ಮಾಡಲು ಮುಂದೆ ಬರಬೇಕೆಂದು ಹೇಳಿಕೆ ಕೊಟ್ಟ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ನಿವೇ ರಾಜ್ಯಾಧ್ಯಕ್ಷರಾಗಿ ಇರಬೇಕೆಂದು ಕಾರ್ಯಕರ್ತರು ಎಲ್ಲಾರು ಒಗ್ಗಟಾಗಿ ನಿರ್ಣಯವನ್ನು ತೆಗೆದುಕೊಂಡರು.

ರಾಜ್ಯಾಧ್ಯಕ್ಷರಾಗಿ ಪ್ರವೀನ್ ಕುಮಾರ್ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಾದಿಗಟ್ಟಿ ರವಿ, ರಾಜ್ಯ ಉಪಾಧ್ಯಕ್ಷರು ಪುನಿತ್, ರಾಜಶೇಖರ್ ಪಾಟೀಲ್, ಬೆಂಗಳೂರು ನಗರ ಅಧ್ಯಕ್ಷ ಶಿವಾನಂದ ಶೆಟ್ಟಿ, ಉಪಾಧ್ಯಕ್ಷರಾಗಿ ಶಿವರಾಜಗೌಡ ಮಂಜೇಶ್, ಪ್ರಧಾನ ಕಾರ್ಯದರ್ಸಿ ಚಂದ್ರವೇಲ್, ರಾಜ್ಯ ಖಜಾಂಚಿ ಆನಂದ, ದೀಪಕ್ ದಯಾಸ್, ಸಹ ಖಜಾಂಚಿ ಬಳ್ಳಾರಿ ಬಿ.ಚಂದ್ರಶೇಖರ್, ರಾಜು, ಇನ್ನಿತರರನ್ನು ಆಯ್ಕೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷರು ವಿ.ರಾಮಾಂಜಿನೇಯ, ಜಿಲ್ಲಾ ಪಧಾಧಿಕಾರಿಗಳು, ವಿ.ಕೆ.ರಾಜು, ಕಟ್ಟೆಸ್ವಾಮಿ, ಪಿ.ಶೇಖರ್, ಬಂಡಾರಿ ಶ್ರೀನಿವಾಸ್, ಬಿ.ಎಲ್.ಅರ್.ಸೀನ, ಬಂಡಿಹಟ್ಟಿ ಮಹೇಶ್, ಕಟ್ಟೆಬಸವ, ಲೋಕೇಶ್ 30 ರಾಜ್ಯಗಳಿಂದ 1500 ಕರವೇ ಕಾರ್ಯಕರ್ತರು ಭಾಗವಹಿಸಿದರು.

ಸುದ್ದಿ ಓದಿ