ಕರ್ನಾಟಕ ರಾಜ್ಯೋತ್ಸವ: ಜನ ಕಲ್ಯಾಣ ರಕ್ಷಣಾ ವೇದಿಕೆದಿಂದ ಅಪ್ಪು ಸ್ಮರಣೆ
ಬಳ್ಳಾರಿ02: ಕರ್ನಾಟಕ ಜನಕಲ್ಯಾಣ ರಕ್ಷಣಾ ವೇದಿಕೆವತಿಯಿಂದ 67ನೇ ಕರ್ನಾಟಕ ರಾಜ್ಯೋತ್ಸವವನ್ನು ನಡೆಸಲಾಯಿತು.
ನಗರ ಪೊಲೀಸ್ ಉಪಾಧೀಕ್ಷಕರಾದ ಶೇಖರಪ್ಪ ಇವರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡಕ್ಕಾಗಿ ಹೋರಾಟ ಮಾಡುವುದುರ ಜೊತೆಗೆ ಕನ್ನಡ ಭಾಷೆಯನ್ನು ಎಲ್ಲಾ ರಂಗದಲ್ಲೂ ಬಳಸುವುದರಿಂದ ಉಳಿಸಬಹುದು. ಅದೇ ರೀತಿ ನಾವೆಲ್ಲರೂ ಕನ್ನಡ ಭಾಷೆಯನ್ನು ಬಳಸುವುದರ ಮೂಲಕ ಕನ್ನಡವನ್ನು ಉಳಿಸೋಣ ಎಂದು ಕರೆನೀಡಿದರು.
ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗಾಂಧಿನಗರ ಪೊಲೀಸ್ ಠಾಣೆಯ ಸಿ.ಪಿ.ಐ ಸಿದ್ಧರಾಮೇಶ್ವರ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಮ್ಮೆಲ್ಲರ ಹೆಮ್ಮೆಯ ದಿನ, ಇದಕ್ಕೆ ಕಾರಣೀಭೂತರಾಗಿ ಭಾಷವಾರು ಪ್ರಾಂತ್ಯರಚನೆಗೆ ಹೋರಾಟ ಮಾಡಿದ ಮದ್ರಾಸ್ ಪ್ರಾಂತ್ಯದಿಂದ ವಿಭಜಿಸಿ ಎಲ್ಲಾ ಕನ್ನಡ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಕನರ್ಾಟಕವನ್ನು ಕಟ್ಟಿದ ಎಲ್ಲಾ ಮಹನೀಯರನ್ನು ಇಂದು ನೆನಪಿಸಿಕೊಳ್ಳಬೇಕಾಗುತ್ತದೆ. ಅದರಂತೆ ಗೋಕಾಕ್ ಚಳುವಳಿ ಸಹ ಒಂದು ಐತಿಹಾಸಿಕ ಹೋರಾಟವಾಗಿತ್ತು. ಇದಕ್ಕೆ ಡಾ. ರಾಜ್ಕುಮಾರ್ ಕೊಡುಗೆ ಅಪಾರವಾಗಿತ್ತು ಎಂದರು.
ಸಾಂಸ್ಕೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿ.ವಿ ಸಂಘದ ಅಧ್ಯಕ್ಷರಾದ ಗುರುಸಿದ್ದಯ್ಯಸ್ವಾಮಿ ಮಾತನಾಡಿ, ಡಾ.ಪುನೀತ್ರಾಜ್ಕುಮಾರ್ರವರ ಕಲೆ ಮತ್ತು ಸಮಾಜ ಸೇವೆಯನ್ನು ನಾವಿಂದು ಸ್ಮರಿಸಲೆಬೇಕು. ಉಸಿರು ಹೋದ ಮೇಲೆ ಹೆಸರು ಉಳಿಯುವಂತ ಕೆಲಸ ಅವರು ಮಾಡಿದ್ದಾರೆ. ಅವರಿಗೆ ಸರ್ಕಾರರ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯ, ಡಾ.ರಾಜ್ಕುಮಾರ್ ಕನ್ನಡ ಸೇವೆ ಮತ್ತು ಪುನೀತ್ ರವರ ಸಮಾಜ ಸೇವೆಯನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರ ಸೇವೆಯನ್ನು ಶ್ಲಾಘಿಸಿದರು.
ವೇದಿಕೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಜೆ.ಎಂ ಬಸವರಾಜಸ್ವಾಮಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಕೋಳೂರು ಚಂದ್ರಶೇಖರ್ಗೌಡ, ಮಹೇಶ್ವರಸ್ವಾಮಿ, ಎಣ್ಣೆ ಅಂಗಡಿ ಎರ್ರಿಸ್ವಾಮಿ, ಹಾಸ್ಯ ಕಲಾವಿದರಾದ ಎರ್ರಿಸ್ವಾಮಿ, ದರೂರು ಪುರುಷೊತ್ತಮಗೌಡ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಮತ್ತು ಅಪಾರ ಕನ್ನಡಾಭಿಮಾನಿಗಳಿದ್ದರು.
ಸೂರ್ಯಕಲಾ ಟ್ರಸ್ಟ್, ಹೇಮಾವತಿಕಲಾ ಬಳಗ ಮತ್ತು ಆಶ್ವಿನಿ ಕಲಾ ತಂಡ ಕಂಪ್ಲಿಯವರಿಂದ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.