ಕಾರ್ಗಿಲ್ ವಿಜಯೋತ್ಸವ: ಹುತಾತ್ಮ ಯೋಧರ ಕುಟುಂಬಗಳಿಗೆ ಸನ್ಮಾನ
ಮುದ್ದೇಬಿಹಾಳ 26: ಕಾರ್ಗಿಲ್ ಯುದ್ಧದಲ್ಲಿ ನೂರಾರು ಜನ ವೀರ ಯೋಧರು ತಮ್ಮ ಕುಟುಂಬವನ್ನು ಲೆಕ್ಕಿಸಸದೇ ತಾವೂ ಪ್ರಾಣ ಕೊಟ್ಟು ದೇಶಕ್ಕೆ ಜಯ ತಂದು ಕೊಟ್ಟು ಇಂದಿನ 25ನೇ ವರ್ಷದ ಕಾರ್ಗಿಲ್ ವಿಜಯ ದಿವಸವಾಗಿದ್ದು ದೇಶದಾದ್ಯಂತ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇಂದು ನಮ್ಮ ದೇಶ ಭಕ್ತಿಯನ್ನು ಪ್ರದರ್ಶಿಸುವ ಮತ್ತು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರನ್ನು ಸ್ಮರಿಸುವ ದಿನವಾಗಿದೆ ಎಂದು ಚಟ್ಟರಕಿ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಮುಖ್ಯ ಬಜಾರದಲ್ಲಿರುವ ಸೈನಿಕ ಮೈದಾನದ ಆವರಣದಲ್ಲಿ ಕಾರ್ಗಿಲ್ ವೀರಯೋಧರ ಸ್ಮಾರಕ ಸಮೀತಿ ವತಿಯಿಂದ ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಸತತ 85 ದಿನಗಳ ಹೋರಾಟದ ಫಲವಾಗಿ ಜಯ ಸಾಧಿಸುವ ಮೂಲಕ ಸಂತಸ ಹಾಗೂ ದುಃಖ ಎರಡನ್ನು ಸಮ್ಮಿಳಿತ ಮಾಡಿಕೊಂಡು ಕಾರ್ಗಿಲ್ ವಿಜಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಹೆತ್ತ ತಂದೆ ತಾಯಂದಿರರು ತಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣದ ಜೊತೆಗೆ ದೇಶಪ್ರೇಮ, ಧರ್ಮ, ಸಂಸ್ಕೃತಿ, ಪರಂಪರೆಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಜೊತೆಗೆ ದೇಶದಲ್ಲಿನ ಎಲ್ಲ ಜನರು ನಿರ್ಭೀತಿಯಿಂದ ನೇಮ್ಮದಿಯಿಂದ ನಿದ್ರೇ ಮಾಡುತ್ತ ಜೀವನ ಸಾಗಿಸುತ್ತೇವೆ ಎಂದರೆ ದೇಶದ ಗಡಿಯಲ್ಲಿ ನಿಂತು ತಮ್ಮ ಜೀವದ ಹಂಗು ತೊರೆದು ಯಾವ ಯಾವ ವೈರಿಯೂ ದೇಶದೊಳಗೆ ನುಸಳದಂತೆ ದೇಶ ಕಾಯುವ ಸೈಕರಿಂದಲೇ ಎಂಬುದನ್ನು ನಾವೇಲ್ಲ ಅರ್ಥೈಸಿಕೊಳ್ಳಬೇಕು, ಯಾವ ಭಾರತಿಯರೂ ಕಾರ್ಗಿಲ್ ಯುದ್ಧವನ್ನು ಮರೆಯಲು ಸಾಧ್ಯವೇ ಇಲ್ಲ, ಈ ಯುದ್ಧದಲ್ಲಿ ಭಾರತಿಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ, ದೇಶದ ಘನತೆಯನ್ನು ಸಾಹಸವನ್ನು ಎತ್ತಿಹಿಡಿದ್ದಾರೆ ಇವರ ತ್ಯಾಗ ಬಲಿದಾನ ದೇಶಪ್ರೇಮ ಎಲ್ಲ ಭಾರತಿಯರಿಗೂ ಸ್ಪೂರ್ತಿಯಾಗಬೇಕಿದೆ, ನಿಟ್ಟಿನಲ್ಲಿ ಕಾರ್ಗಿಲ್ ವೀರಯೋಧರ ಸ್ಮಾರಕ ಸಮೀತಿಯವರು 25ನೇ ಕಾರ್ಗಿಲ್ ವಿಜಯೋತ್ಸವವನ್ನು ಅದ್ದೂರಿಯಿಂದ ಆಚರಿಸುವ ಮೂಲಕ ಯುದ್ಧದಲ್ಲಿ ಮಡಿದ ಸೈನಿಕರ(ಯೋಧರ) ಕುಟುಂಬವನ್ನು ಕರೆದು ಸನ್ಮಾನಿಸಿ ಗೌರವಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.
ತಾಲೂಕಿನ ಬಳವಾಟ ಗ್ರಾಮದ ಲೇಪ್ಟಿನೆಂಟ ಕರ್ನಲ್ ಶಿವಾನಂದ ಬಿರಾದಾರ ಹಾಗೂ ನಿವೃತ್ತ ಕರ್ನಲ್ ಸತೀಶ ದೇಶಪಾಂಡೆ ಅವರು ಮಾತನಾಡಿದ ಅವರು ಸೈನಿಕರಾಗಿ ಸೇವೆಯನ್ನು ಹೋಗಳಿದರೆ ಸಾಲದು ಸೈನಿಕರ ಕುಟುಂಭಗಳಿಗೆ ಸರಕಾರಗಳು ಸಹಕಾರ ಹಾಗೂ ಸರಕಾರದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಸಿಗುವಂತೆ ನೋಡಿಕೊಳ್ಳಬೇಕಿದೆ. ಯಾಕೇಂದರೇ ಸಣ್ಣ ಸೌಲಭ್ಯ ಪಡೆದುಕೊಳ್ಳಬೇಕಾದರೂ ಸಹಿತ ತಾಲೂಕಾ ಮಟ್ಟದ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಕಾರತ್ಮಕ ಸ್ಪಂದನೆ ನೀಡದೇ ಕಚೇರಿಗೆ ಅಲೆದಾಡುವಂತೆ ಮಾಡುತ್ತಿರುವ ಘಟನೆಗಳನ್ನು ಕಂಡಿದ್ದೇವೆ ಇದರಿಂದಾಗಿ ಸೈನಿಕ ಹುದ್ದೇಗೆರಲು ಕೆಲವು ಜನ ಹಿಂಜರಿಯುವಂತಾಗುತ್ತದೆ. ಈ ಹಿನ್ನೇಲೆಯಲ್ಲಿ ಸರಕಾರಗಳು ಸೈನಿಕ ಯಾವೂದೇ ಮೂಲಬೂತ ಸೌಲಭ್ಯಗಳಿಗೆ ಅವುಗಳನ್ನು ವಿಶೇಷ ಕೋಟಾದಡಿಯಲ್ಲಿ ತ್ವರಿತ ಗತಿಯಲ್ಲಿ ಒದವಗಿಸುವಂತೆ ನೋಡಿಕೊಳ್ಳಬೇಕಿದೆ. ನಾನು ಸೈನಿಕನಾಗಿ ಮುಂದೆ ಲೇಪ್ಟಿನೆಂಟ್ ಕರ್ನಲ್ ರಾಗಿ ಸೇವೆ ಸಲ್ಲಿಸುತ್ತಿದ್ದೇ ನಿವೃತ್ತ ಸೈನಿಕರಿಗಾಗಲಿ ಅಥವಾ ವೀರಮರಣಹೊಂದಿದ ಸೈನಿಕರ ಕುಟುಂಭದವರಾಗಲಿ ಸರಕಾರದಿಂದ ಸೌಲಭ್ಯಗಳಿಂದ ವಂಚಿತಗೊಂಸಡರೆ ನನ್ನ ಸಂಪರ್ಕಿಸಿ ನಾನು ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತೇನೆ ಎಂದರು.
ಮಹಾರಾಷ್ಟ್ರ ಸರಕಾರದ ಗ್ರಹ ಇಲಾಖೆಯ ವಿಶೇಷ 8 ಕಮಾಂಡೆಟ್ ಮತ್ತು ಹಿರಿಯ ಸಿಬ್ಬಂದಿ ಅಧಿಕಾರಿ ರಾಜೇಶ್ವರಿ ಕೋರಿಯವರು ಮಾತನಾಡಿ ದೇಶದಲ್ಲಿ ಸೈನಿಕ ಹುದ್ದೇಗೆರಲು ಕೇವಲ ಪುರುಷರು ಮಾತ್ರ ಅಲ್ಲ ಯುವತಿಯರೂ ಕೂಡ ಸೈನಿಕರಾಗಿ ದೇಶದ ಸೇವೆ ಸಲ್ಲಿಸಬಹುದಾಗಿದೆ ಜೊತೆಗೆ ಇಂಡಿಯನ್ ನೇವಿ(ಹಡಗು ಬಂದರು) ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶವಿದೇ ಯಾವೂದೇ ಭಯವಿಲ್ಲದೇ ಸೈನಿಕರಾಗುವ ಮೂಲಕ ಸ್ತ್ರೀ ಎಲ್ಲ ರಂಗದಲ್ಲೂ ಮುಂದೆ ಇದ್ದಾಳೆ ಎನ್ನುವುದನ್ನು ಸಾಧಿಸಿ ತೊರಿಸಬೇಕು ಎಂದು ಕರೆ ನೀಡಿದರು.
ಕಾರ್ಗಿಲ್ ವೀರಯೋಧರ ಸ್ಮಾರಕ ಸಮೀತಿ ವತಿಯಿಂದ ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ವೀರ ಮರಣಹೊಂದಿದ ದಾವಲಸಾಬ ಕಂಬಾರವರ ಮನೆಯಿಂದ ಅಂಬೇಡ್ಕರ ವೃತ್ತದ ಮಾರ್ಗವಾಗಿ, ಬಸವೇಶ್ವರ ವೃತ್ತದಿಂದ ಸೈನಿಕ ಮೈದಾನದವರಿಗೆ ವಿವಿಧ ಕಲಾ ತಂಡಗಳಿಂದ, ಶಾಲಾ ವಿದ್ಯಾರ್ಥಿಗಳಿಂದ, ನಿವೃತ್ತ ವೀರಯೋಧರ ಸಂಘದಿಂದ ಜ್ಯೋತಿಯಾತ್ರೆ ನಡೆಸಲಾಯಿತು.
ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿದ್ದರು. ಪುರಸಭರೆ ಮುಖ್ಯಧಿಕಾರಿ ಮಲ್ಲನಗೌಡ ಬಿರಾದಾರ, ಮಹಾಂತೇಶ ಬೂದಿಹಾಳಮಠ, ಅಧ್ಯಕ್ಷ ಚಂದ್ರಶೇಖರ ಕಲಾಲ, ಉಪಾಧ್ಯಕ್ಷ ಶ್ರೀಕಾಂತ ಹಿರೇಮಠ, ಪ್ರಧಾನ ಕಾರ್ಯದರ್ಶಿ ಪುನಿತ್ ಹಿಪ್ಪರಗಿ, ಸಂತೋಷ ಬಾದರಬಂಡಿ, ಆನಂದ ತುಪ್ಪದ, ರಾಜು ಬಳ್ಳೋಲಿ, ರವೀಂದ್ರ ಬಿರಾದಾರ, ಶೇಖರ ಢವಳಗಿ, ಹಣಮಂತ ನಲವಡೆ, ರಾಜಶೇಖರ ಹೊಳಿ ಸೇರಿದಂತೆ ಹಲವರು ಇದ್ದರು. ಉದಯ ರಾಯಚೂರ ನಿರೂಪಿಸಿದರು. ಬಸವವರಾಜ ನಂದಿಕೇಶ್ವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.