ವಿದ್ಯಾರ್ಥಿನಿಯರಿಗೆ ಸ್ವರಕ್ಷಣೆಗಾಗಿ ಕರಾಟೆ ತರಬೇತಿ ಅತ್ಯವಶ್ಯಕ: ರಾಜೇಶ್ವರಿ ಸುಬ್ಬರಾಯುಡು
ಬಳ್ಳಾರಿ :17: ಕರಾಟೆ ತರಬೇತಿಯು ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳಲ್ಲಿ ತರಬೇತಿ ನಡೆಯುತ್ತಿದೆ. ಈ ತರಬೇತಿ ಸಾಕಷ್ಟು ಹೆಚ್ಚಿನ ಮಟ್ಟಿಗೆ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಕರಾಟೆ ತರಬೇತಿಯನ್ನು ಪಡೆಯಬೇಕು. ಯಾರೇ ಆಗಿರಲಿ ಅಪಾಯದ ಅಂಚಿನಲ್ಲಿ ಇದ್ದಾಗ ಹಾಗೂ ತಮ್ಮನ್ನು ಉಳಿವಿಗಾಗಿ ಉತ್ತಮ ಸೌಲಭ್ಯ, ಆರೋಗ್ಯಕ್ಕಾಗಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ಪ್ರಮುಖ ಪಾತ್ರ ವಹಿಸಿದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರ ಎಮ್ ರಾಜೇಶ್ವರಿ ಸುಬ್ಬರಾಯುಡು ಹೇಳಿದರು.
ಅವರು ಬಳ್ಳಾರಿಯ ಗಾಂಧಿ ಭವನದಲ್ಲಿ ದಿ. 17 ಮತ್ತು 18ರಂದು ಮೂರು ದಿನಗಳ ಕಾಲ ನಡೆಯಲಿರುವ ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ ವತಿಯಿಂದ ಆಯೋಜಿಸಿದ ರಾಷ್ಟ್ರಮಟ್ಟದ ಕರಾಟೆ ತರಬೇತುದಾರರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಅನುಕೂಲವಾಗಬೇಕು. ಆ ನಿಟ್ಟಿನಲ್ಲಿ ದೇಶದ ನಾನಾ ರಾಜ್ಯಗಳಿಂದ ಬಂದಿರುವಂತಹ ಎಲ್ಲಾ ತರಬೇತುದಾರರು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ತರಬೇತಿ ನೀಡಬೇಕು. ಮತ್ತು ಹೆಣ್ಣುಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಏನಾದರೂ ನಡೆಯುತ್ತಿದ್ದರೆ ಅದು ಕೇವಲ ಕರಾಟೆ ಕಲೆ ಹಾಗೂ ಕರಾಟೆ ತರಬೇತಿಯಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಹಾನ್ ಶತ್ತರ್ ಜೀತ್ ಚೌದರಿ ಪಶ್ಚಿಮ ಬಂಗಾಳ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದವರಾದ ಜಿಲ್ಲಾಧ್ಯಕ್ಷ ರಾಮಾಂಜನೇಯ, ಕರಾಟೆ ಸ್ಪೋರ್ಟ್ಸ ಅಸೋಸಿಯೇಷನ್ ಅಧ್ಯಕ್ಷ ಹರಿ ಶಂಕರ್ ಗರ್ವಾಲ್, ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುರೇಶ್, ಕರವೇ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ರಾಜ ವಿ ಕೆ,17ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರಾದ ಹೊನ್ನಪ್ಪ ನವರು ಉಪಸ್ಥಿತರಿದ್ದರು.
ಈ ರಾಷ್ಟ್ರಮಟ್ಟದ ತರಬೇತಿದಾರ ಶಿಬಿರಕ್ಕೆ ದೇಶದ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಗುಜರಾತ್, ಒಡಿಸ್ಸಾ, ಅಸ್ಸಾಂ, ತಮಿಳ್ ನಾಡು, ಕರ್ನಾಟಕ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಕರಾಟೆ ತರಬೇತಿದಾರರು ಭಾಗವಹಿಸಿದ್ದಾರೆ ಎಂದು ಟ್ರಡಿಷನಲ್ ಕರಾಟೆ ಅಕಾಡೆಮಿ ಕರ್ನಾಟಕದ ಸಂಸ್ಥಾಪಕ ಹಾಗೂ ಅಧ್ಯಕ್ಷರು ಹಿರಿಯ ಕರಾಟೆ ತರಬೇತುದಾರರಾದ ಕಟ್ಟೆ ಸ್ವಾಮಿ ತಿಳಿಸಿದರು.
ನಂತರ ಸ್ವಾಗತವನ್ನು ಸಂಸ್ಥೆ ಹಿರಿಯ ಕರಾಟೆ ತರಬೇತುದಾರ ಸುಭಾಷ್ ಚಂದ್ರ ಮಾಡಿದರು. ಪ್ರಸ್ತಾವಿಕವಾಗಿ ಶಿಹಾನ್ ಸತ್ತರ್ ಜೀತ್ ಚೌದರಿ ಮಾತನಾಡಿದರು.