ಬಳ್ಳಾರಿ

ಕನ್ನಿಕಾಪರಮೇಶ್ವರಿ ದೇವಿಗೆ ತರಕಾರಿಗಳಿಂದ ಮಾಡಿದ ಶಾಕಾಂಬರಿ ಅಲಂಕಾರ

ಕನ್ನಿಕಾಪರಮೇಶ್ವರಿ ದೇವಿಗೆ ತರಕಾರಿಗಳಿಂದ ಮಾಡಿದ ಶಾಕಾಂಬರಿ ಅಲಂಕಾರ

                            

ಲೋಕದರ್ಶನ ವರದಿ 

 ಕಂಪ್ಲಿ 24: ಸ್ಥಳೀಯ ವಾಸವಿ ಮಹಿಳಾ ಮಂಡಳಿಯಿಂದ, ಮಹಾ ಆಷಾಢ ಹುಣ್ಣಿಮೆ ಅಂಗವಾಗಿ ಇಲ್ಲಿನ ವಾಸವಿ ದೇವಸ್ಥಾನ ಕನ್ನಿಕಾಪರಮೇಶ್ವರಿ ದೇವಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ನಡೆದವು ಆಷಾಢ ಹುಣ್ಣಿಮೆ ನಿಮಿತ್ತ ಕನ್ನಿಕಾಪರಮೇಶ್ವರಿ ದೇವಿಯನ್ನು ಹಲವು ತರಕಾರಿಗಳಿಂದ ಮಾಡಿದ ಶಾಕಾಂಬರಿ ಅಲಂಕಾರ ಎಲ್ಲರ ಗಮನ ಸೆಳೆಯಿತು. ಬೆಳಗ್ಗೆ ಅಭಿಷೇಕ, ಸುಮಂಗಲೆಯರಿಂದ 101 ಲಲಿತ ಸಹಸ್ರ ನಾಮಾವಳಿ ಪಾರಾಯಣ ಮಾಡಲಾಯಿತು. ಅರ್ಚಕರಾದ ಕ್ರಿಷ್ಣಭಟ್ಟ ವಾಸವಿಮಹಿಳಾ ಮಂಡಳಿ ಅಧ್ಯಕ್ಷೆ ಟಿ.ರಮಾವೆಂಕಟರಮಣ, ಉಪಾಧ್ಯಕ್ಷೆ ಟಿ.ರಾಧಾ ಶ್ರೀನಿವಾಸ, ಪ್ರಮುಖರಾದ ಎಸ್‌.ವಿನೋದಾ ಗೋವಿಂದ, ಈ ಭವಾನಿ ಕೃಷ್ಣ, ಟಿ.ಚಂದ್ರಕಲಾ ಬಾಲಯ್ಯ, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಡಿ.ವಿ.ಸುಬ್ಬಾರಾವ್, ಉಪಾಧ್ಯಕ್ಷ ಡಿ.ಶ್ರೀಧರ ಶ್ರೇಷ್ಠಿ, ಮುಖಂಡರಾದ ಜಿ ನರಸಿಂಹಲು ವಿ.ರಾಮಲಿಂಗಯ್ಯ, ವೈ.ಚಂದ್ರಮೋಹನ, ಜೆ.ಎಸ್‌.ತಿಪ್ಪಯ್ಯ ಶ್ರೇಷ್ಠಿ, ಟಿ.ವೆಂಕಟರಮಣ ಪಾಲ್ಗೊಂಡಿದ್ದರು. 


ಸುದ್ದಿ ಓದಿ