ಪಾಲಿಕೆಯಲ್ಲಿ ಕನ್ನಡಪರ ನಿರ್ಣಯಕ್ಕೆ ಕನ್ನಡಿಗರ ಬಿಗಿ ಪಟ್ಟು : ಸಿಎಂ ಬಳಿ ನಿಯೋಗಕ್ಕೆ ನಿರ್ಧಾರ

ಪಾಲಿಕೆಯಲ್ಲಿ ಕನ್ನಡಪರ ನಿರ್ಣಯಕ್ಕೆ ಕನ್ನಡಿಗರ ಬಿಗಿ ಪಟ್ಟು : ಸಿಎಂ ಬಳಿ ನಿಯೋಗಕ್ಕೆ ನಿರ್ಧಾರ
Kannadigas strongly oppose pro-Kannada resolution in the corporation: Decision to send delegation to

ಬೆಳಗಾವಿ : "ಬೆಳಗಾವಿ ಕರ್ನಾಟಕದ ಅವಿಭಾಜ್ಯ" ಗಡಿ ವಿಷಯದಲ್ಲಿ ಮಹಾಜನ್ ವರದಿ ಅಂತಿಮ ಎಂಬ ನಡುವೆ ನಿರ್ಣಯ ವನ್ನು ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸಬೇಕೆಂಬ ಬೇಡಿಕೆಯನ್ನೊಳಗೊಂಡು ಕನ್ನಡ ಸಂಘಟನೆಗಳ ವಿವಿಧ ಹಕ್ಕೊತ್ತಾಯ ಸಂಬಂಧ ಹೋರಾಟವನ್ನು ತೀವ್ರಗೊಳಿಸಲು ಏ.2 ನೇ ವಾರ ಮುಖ್ಯಮಂತ್ರಿ, ಗಡಿ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಭೇಟಿಗಾಗಿ 12 ಕನ್ನಡ ಸಂಘಟನೆಗಳ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ಯಲು ಕನ್ನಡ  ಸಂಘಟನೆಗಳ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.  

    ಈ ಕುರಿತು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಕೊಳ್ಳಲಾಗಿದೆ.

ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ನಿರ್ಣಯಗಳನ್ನು ಅಂಗೀಕರಿಸುವ ಸಂಬಂಧ ಉಪ ಮಹಾಪೌರ ಹನುಮಂತ ಕೊಂಗಾಲಿ ಅವರು ಕನ್ನಡ ಹೋರಾಟಗಾರ ಬಲರಾಮ ಮಾಸೇನಟ್ಟಿ ಅವರಿಗೆ ನೀಡಿದ ಭರವಸೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಕನ್ನಡ ಸಂಘಟನೆಗಳ ಮುಖಂಡರು ನಿರ್ಣಯಗಳ ಬಗ್ಗೆ ಚರ್ಚಿಸಲು ಯಾರೇ ಆಹ್ವಾನ ನೀಡಿದರೂ ಚರ್ಚೆಗೆ ಸಿದ್ಧವಿರುವದಾಗಿ ತಿಳಿಸಿದರು.

  “ಗಡಿವಿವಾದ ಸಂಬಂಧ ಮಹಾಜನ್ ವರದಿಯೇ ಅಂತಿಮ” ಹಾಗೂ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ನಿರ್ಣಯಗಳನ್ನು ಪಾಲಿಕೆಯಲ್ಲಿ ಅಂಗೀಕರಿಸುವಂತೆ ಆಗ್ರಹಿಸಿ ಸಮಾನ ಮನಸ್ಕ ಕನ್ನಡ ಪರ ಸಂಘಟನೆಗಳು ಪ್ರತ್ಯೇಕವಾಗಿ ಮಂಗಳವಾರದಿಂದ ಮಹಾಪೌರರಿಗೆ ಹಾಗೂ ಉಪ ಮಹಾಪೌರರಿಗೆ ಮನವಿ ಅರ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.  ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗಿದ್ದ 50 ಲಕ್ಷ ರೂ.ಗಳ ಅನುದಾನದ ದುರ್ಬಳಕೆ ಬಗ್ಗೆ ಈಗಾಗಲೇ12 ಕನ್ನಡ ಸಂಘಟನೆಗಳು ಮುಖ್ಯಮಂತ್ರಿಗಳಿಗೆ, ಗಡಿ ಉಸ್ತುವಾರಿ ಸಚಿವರಿಗೆ, ಮುಖ್ಯ ಕಾರ್ಯದರ್ಶಿಗಳಿಗೆ, ಪ್ರವಾಸೋದ್ಯಮ ಕಾರ್ಯದರ್ಶಿಗಳಿಗೆ ದೂರು ನೀಡಿದ್ದು ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ತಮಗೆ ಅಧಿಕೃತವಾಗಿ  ತಿಳಿಸಲಾಗಿದೆ ಎಂದು ಬಲರಾಮ ಮಾಸೇನಟ್ಟಿ ಅವರು ಸಭೆಗೆ ವಿವರಿಸಿದರು. 

  ಈ ಸಂಬಂಧ ಬೆಂಗಳೂರಿಗೆ ತೆರಳಲಿರುವ ನಿಯೋಗದ ಸಂದರ್ಭದಲ್ಲಿ ವಿಷಯವನ್ನು ಪ್ರಸ್ತಾಪಿಸಲಾಗುವುದೆಂದು ಅಶೋಕ ಚಂದರಗಿ ತಿಳಿಸಿದರು.  

   ರಾಜ್ಯ ಸರಕಾರ ನೀಡಿದ 7 ಕೋಟಿ.ರೂ.ಗಳ ಅನುದಾನದಲ್ಲಿ ಬೆಳಗಾವಿಯಲ್ಲಿ ನಿರ್ಮಿಸಲಾದ ಕನ್ನಡ ಭವನವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂಬ ಬೇಡಿಕೆಯ ಬಗ್ಗೆ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಿದ್ದು ಮುಂದಿನ ದಿನಗಳಲ್ಲಿ ಕನ್ನಡ ಸಂಘಟನೆಗಳ ಬೇಡಿಕೆಯನ್ನು ಮತ್ತಷ್ಟು ತೀವ್ರಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.  

  ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ 2024 ರ ರಾಜ್ಯೋತ್ಸವ ದಿನದಂದು ಪ್ರತಿಷ್ಠಾಪಿಸಲಾಗಿದ್ದ ಹಲ್ಮಿಡಿ ಶಾಸನದ ಪ್ರತಿಕೃತಿಯು ನಾಪತ್ತೆಯಾಗಿದ್ದು ಇದನ್ನು ಒಂದು ವಾರದಳೊಗೆ ಮರು ಸ್ಥಾಪನೆ ಮಾಡಲು ನೀಡಲಾಗಿದ್ದ ಗಡುವನ್ನು ಇನ್ನೊಂದು ವಾರ ಕಾಲ ವಿಸ್ತರಿಸಲು ಸಭೆಯು ನಿರ್ಧರಿಸಿತು.  

   ಕಿತ್ತೂರು ಕನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೆಗೌಡ ಬಣ) ಜಿಲ್ಲಾಧ್ಯಕ್ಷ ವಾಜೀದ ಹಿರೇಕೋಡಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಕನ್ನಡ ಹೋರಾಟಗಾರರಾದ ಬಾಳಪ್ಪ ಗುಡಗೇನಟ್ಟಿ, ಸಣ್ಣತಮ್ಮಾ ಮೂಕನವರ, ನಾಗೇಶ ಕೊಪ್ಪದ, ಮಲ್ಲಪ್ಪಾ ಗುಡಗೇನಟ್ಟಿ, ದಯಾನಂದ ಪವಾರ, ಈಶ್ವರಗೌಡ ಪಾಟೀಲ, ಸತೀಶ ನಾಯಕ ಫರಿದಾ ನದಾಫ್, ರಾಣಿ ಬೀಟಿ, ಸಂಗೀತಾ ಕಾಂಬಳೆ ಹಾಗೂ ಅರವಿಂದ ಸಿಂಗ್ ನೇರಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಓದಿ