ಕಸಾಪದಿಂದ ಕನ್ನಡ ರಾಜ್ಯೋತ್ಸವ
ಲೋಕದರ್ಶನ ವರದಿ
ಮುಂಡಗೋಡ:67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಎಸ್.ಡಿ.ಮುಡೆಣ್ಣವರ ಮಂಗಳವಾರ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಕನ್ನಡ ನಾಡು ಮತ್ತು ಕನ್ನಡ ನುಡಿಯ ಬಗ್ಗೆ ಗೌರವ ತೋರಬೇಕು. ಕನ್ನಡ ಭಾಷೆ ಜಗತ್ತಿನಲ್ಲಿಯೇ ಅತ್ಯುತ್ತಮ ಭಾಷೆಯಾಗಿ ಹೊರ ಹೊಮ್ಮಿದೆ. ಕನ್ನಡವನ್ನು ಪ್ರೀತಿಸಬೇಕು ಎಂದರು. ಈ ಸಂದರ್ಭದಲ್ಲಿ ಆರ್.ಜೆ.ಬೆಳ್ಳೆನವರ, ಡಾ.ಪಿ.ಪಿ.ಛಬ್ಬಿ, ಸಂಗಪ್ಪ ಕೋಳೂರ, ಎಸ್.ಬಿ.ಹೂಗಾರ, ಚಿದಾನಂದ ಹರಿಜನ, ಮಹೇಶ ಉಮ್ಮಚಗಿ, ಸುಭಾಸ ಡೋರಿ, ಶಾರದಾ ರಾಠೋಡ, ಚಿದಾನಂದ ಪಾಟೀಲ, ಜಿ.ಪಿ.ನಾಯಕ ಮತ್ತು ನಾಗರಾಜ ಅರ್ಕಸಾಲಿ ಉಪಸ್ಥಿತರಿದ್ದರು.