ಹಗರಿಬೊಮ್ಮನಹಳ್ಳಿ

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 02: ಪಟ್ಟಣದ ವಾಲ್ಮೀಕಿ ನೌಕರರ ಭವನದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. 

ಈ ಸಂಧರ್ಭದಲ್ಲಿ ಗೌರವಾಧ್ಯಕ್ಷ ಚಿಂತ್ರಪಳ್ಳಿ ದೇವೇಂದ್ರ​‍್ಪ ಮಾತನಾಡಿ ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಯಿಂದ ಬೆಳೆಸಬೇಕು, ಅನ್ಯ ಭಾಷೆಯನ್ನು ಕಿಳುಮಟ್ಟಕ್ಕೆ ಕಂಡರೆ ಅದು ಕನ್ನಡವನ್ನು ಪ್ರತೀಸಿದಂತಲ್ಲ, ಪ್ರತಿಯೊಂದು ಭಾಷೆಯನ್ನು ಗೌರವಿಸಿ, ಕನ್ನಡ ಭಾಷೆ ನಮ್ಮ ತಾಯಿ ಭಾಷೆ ಇದನ್ನು ಪ್ರೀತಿಸಿ ಪೋಶಿಸಿ ಬೆಳೆಸಿ ಎಂದು ಕರೆ ನೀಡಿದರು. ರಾಜಕಾರಣಿಗಳು ಕೇವಲ ತಮ್ಮ ಬೆಳೆ ಬೆಯಿಸಿಕೊಳ್ಳುಲು ವೇದಿಕೆಯಲ್ಲಿ ಕನ್ನಡದ ಉಳಿವಿನ ಬಗ್ಗೆ ಹೋರಾಟದ ಮಾತುಗಳನ್ನಾಡುತ್ತಿದ್ದಾರೆ, ಅದು ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗಿರುವುದು ನಮ್ಮ ದುರ್ದೈವ, ಕನ್ನಡ ಬಾಷೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯೆವಾಗಿದೆ, ನಮ್ಮ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯು ಕನ್ನಡ ನಾಡು ನುಡಿ ಜಲ ರಕ್ಷಣೆಗೆ ಸದಾ ಸಇದ್ದವಿದೆ ಎಂದರು. 

ತಾಲೂಕಾಧ್ಯಕ್ಷ ಭೀಮರಾಜ್ ನಾಯಕ್ ಡಿ ಮಾತನಾಡಿ ಇಂದು ಕರ್ನಾಟಕದಲ್ಲಿ ನೆಲೆಯೋರಿ ಇಲ್ಲಿನ ಗಾಳೀ ನೀರು ಬೆಳಕು ಸ್ಥಳ ಬಳಸಿಕೊಂಡು ಕನ್ನಡ ಭಾಷೆ ಕಲಿಯದ ಕಮಂಗಿಗಳಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಿದೆ, ದಶ ದಇಕ್ಕುಗಳಲ್ಲಿಯೂ ಕನ್ನಡ ಬಾಷೆಯನ್ನು ಹತ್ತಿಕ್ಕುತ್ತಿರುವ ಪರಭಾಷಿಕರನ್ನು ಕನ್ನಡಾಂಬೆ ಸಹಿಸಿಕೊಂಡಿರುವುದು ನಮ್ಮ ನಾಡಿನ ಸರ್ವ ಜನಾಣಗದ ಶಾಂತಿಯ ತೋಟವಾಗಿದೆ ಎಂಬುದಕ್ಕೆ ಅನುಮಾನವಿಲ್ಲ, ಪರ ಭಾಷೆಯನ್ನು ದ್ವೇಶಿಸಿ ಎಂಬ ಉದ್ದೇಶವಲ್ಲ, ನಮ್ಮ ನಾಡಿನಲ್ಲಿದ್ದು ಇಂದು ನಮ್ಮ ಕಣ್ಣಡವನ್ನು ಉಳಿಸಿ ಎಂಬ ನಾಮ ಫಲಕ, ಬ್ಯಾನರ‌್ಗಳನ್ನು ಹಾಕುತ್ತಿರುವುದು ನಿಜಕ್ಕೂ ಕರ್ನಾಟಕದ ದುರಂತವಗಿದೆ ಇಂದು ಕನ್ನಡ ಭಾಷೆ ಇನ್ನು ಅಚ್ಚಳೀಯದೇ ಉಳಿದಿರುವುದು ಕೇವಲ ಕನ್ನಡ ಶಾಲೆಗಳಿಂದ ಎಂದರೆ ತಪ್ಪಾಗಲಾರದು ಮುಂದಿನ ದಿನಗಳಲ್ಲಿ ಮುಚ್ಚಿರುವ ಕನ್ನಡ ಶಾಲೆಗಳನ್ನು ತೆರೆದು ಕನ್ನಡಕ್ಕೆ ಅಗುತ್ತಿರುವ ಅನ್ಯಯದ ವಿರುಧ್ಧ ಯುವ ಸಮೂಹವ ಸಿಡಿದೇಳಬೇಕಿದೆ, ವಿಜೃಂಭಣೆಯಿಂದ ಜರುಗಬೇಕಿದ್ದ ಕನ್ನಡ ಹಬ್ಬ ಇಂದು ಮೇರು ನಟ ಪುನಿತ್ ರಾಜ್‌ಕುಮಾರ್ ಅವರ ಅಕಲಿಕ ನಿಧನದಿಂದ ಕಳೆಗುಂದಿದೆ, ನಿಜಕ್ಕೂ ಅವರು ಕೇವಲ ಚಿತ್ರ ರಂಗಕ್ಕೆ ಸೀಮಿತವಾಗದೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ಸಮರ​‍್ಕವಾಗಿ ಬೆಳಸಿಕೊಂಡಿದ್ದು ಶ್ಲಾಘನೀಯ ಎಂದರು. 

ಈ ಸಂಧರ್ಭದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ತಾಲೂಕು ಘಟಕದ ಕಾರ್ಯದರ್ಶಿ ರಾಜಾವಲಿ ಗಡ್ಡದ್, ಫಣಿರಾಜ್, ನವೀನ್ ಕುಮಾರ, ಉಮೇಶ್, ಶಿವು,ಕೃಷ್ಣ, ದುರುಗೇಶ್, ದುರುಗಪ್ಪ,ಬಸಯ್ಯ, ಲಿಂಗರಜ, ನಿಂಗರಾಜ್, ಬಸವರಾಜ ಸೇರಿದಂತೆ ಪದಾಧಿಕಾರಿಗಳು ಸದಸ್ಯರುಗಳು ಭಾಗವಹಿಸಿದ್ದರು. 


ಸುದ್ದಿ ಓದಿ