ಸಸಿ ನೆಟ್ಟು ಸಿಹಿ ಹಂಚಿ ಕನ್ನಡ ರಾಜ್ಯೋತ್ಸವ ಆಚರಣೆ
ಲೋಕದರ್ಶನ ವರದಿ
ಶಿರಹಟ್ಟಿ 01: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ವತಿಯಿಂದ ಶಿರಹಟ್ಟಿ ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆ (ಎಂ.ಪಿ.ಎಸ್)ಯಲ್ಲಿ ಗಿಡಗಳನ್ನು ನೆಡುವ ಮೂಲಕ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಲೇಖನ ಸಿಹಿ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಎಚ್ ಪೂಜಾರ ಮಾತನಾಡಿ, ಕನ್ನಡ ನಾಡು, ನುಡಿಗೆ ಅನೇಕ ಮಹನೀಯರು ಶ್ರಮಿಸಿದ್ದಾರೆ, ಅಂತಹ ಮಹನೀಯರ ಆದರ್ಶಗಳು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಕನ್ನಡಪರ ಸಂಘಟನೆಗಳ ಕಾರ್ಯಗಳು ಶ್ಲಾಘನೀಯವಾದದ್ದು ಎಂದರು.
ಈ ಸಂಧರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಜಾಪರ ವೇದಿಕೆಯ ತಾಲ್ಲೂಕ ಅಧ್ಯಕ್ಷ ಹಸನ್.ಎನ್.ತಹಶೀಲ್ದಾರ, ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗರ ಹಬ್ಬವಾಗಿದೆ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕಾರ್ಯವಾಗಿದೆ ಸರಕಾರಿ ಶಾಲೆಗಳಿಗೆ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಈ ಸಂಧರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಸ್ ಎಫ್ ಸುಣಗಾರ, ಎಸ್ ಬಿ ಖೋಕಲೆ, ಎಮ್ ವೈ ಹರಿಜನ, ಎಸ್ ಎಸ್ ಶೆಟ್ಟರ, ಎಸ್ ಸಿ ಮೂರಶಿಳ್ಳಿ, ಸುಭಾಸಚಂದ್ರ ಬಿಡವೆ, ಬಸವರಾಜ ಮಠಪತಿ, ಅಜ್ಜಪ್ಪ ಬಿಡವೆ, ಮೊಹ್ಮದ ಅಜರುದ್ದಿನ, ಬೈರೆಕದಾರ, ಮಂಜುನಾಥ ಕಪ್ಪತ್ತನವರ, ಉಮೇಶ.ಪಲ್ಲೇದ, ರಂಜೀತ.ಕೋಳಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.