ಮುಖ್ಯ ಶಿಕ್ಷಕ ಮಂಜುನಾಥಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ಮುಂಡಗೋಡ: ಕರ್ನಾಟಕ ಸೋಷಿಯಲ್ ಕ್ಲಬ್ ಹುಬ್ಬಳ್ಳಿ ಮತ್ತು ಚೇತನ್ ಫೌಂಡೇಶನ್ ಇವರ ವತಿಯಿಂದ ನೀನೇ ರಾಜಕುಮಾರ ಡಾ.ಪುನೀತ್ ರಾಜಕುಮಾರ ಪುಣ್ಯಸ್ಮರಣೆ ಅಂಗವಾಗಿ ಹುಬ್ಬಳ್ಳಿ ಗೋಕುಲ ರಸ್ತೆಯ ಗೆಲಾಕ್ಸಿ ಹಾಲ್ನಲ್ಲಿ ಆಯೋಜಿಸಿದ್ದ ಪುನೀತ್ ಹಾಗೂ ಡಾ.ರಾಜಕುಮಾರ ಚಿತ್ರಗಳ ಕರೋಕೆ ರಾಜ್ಯಮಟ್ಟದ ಗೀತಗಾಯನ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ತಾಲೂಕಿನ ಧರ್ಮಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಪುರ್ಲಿ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.