ವಿಜಯಪುರ

ಕನ್ನಡ ಪ್ರಾಥಮಿಕ ಶಾಲೆಯ "ವಿಶ್ವ ಪರಿಸರ ದಿನಾಚರಣೆ"

ಕನ್ನಡ ಪ್ರಾಥಮಿಕ ಶಾಲೆಯ "ವಿಶ್ವ ಪರಿಸರ ದಿನಾಚರಣೆ"

ಲೋಕದರ್ಶನ ವರದಿ 

ವಿಜಯಪುರ 05: ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆ ಯ ಆವರಣದಲ್ಲಿ ಶುಕ್ರವಾರದಂದು "ವಿಶ್ವ ಪರಿಸರ ದಿನಾಚರಣೆ"ಯ ನಿಮಿತ್ಯ ಸಸಿ ನೆಡುವ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರಿಸರ ಕುರಿತು ಮಾತನಾಡಿದ ಬನ್ಸಿಲಾಲ್ ದ ರಬಾರ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಹೆಚ್‌.ಮಣ್ಣೂರ ದೈನಂದಿನ ಜೀವನದಲ್ಲಿ ಪರಿಸರದ ಮಹತ್ವವನ್ನು  ವಿದ್ಯಾರ್ಥಿಗಳು ಮತ್ತು  ಸಾರ್ವಜನಿಕರು, ಸರ್ಕಾರ ಸಂಘ ಸಂಸ್ಥೆಗಳು, ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರಲ್ಲದೆ ಇತ್ತೀಚಿಗೆ ಭೂಮಿಯ ಉಷ್ಣತೆ ಹೆಚ್ಚಾಗಲು ’ಕಾರ್ಬನ್ ಡೈ ಆಕ್ಸೈಡ್‌’ ಮತ್ತು ಮೀಥೇನ್ ಮೊದಲಾದ ಹಸಿರು ಮನೆ ಅನಿಲಗಳ ಪ್ರಮಾಣ ಹೆಚ್ಚಾಗುತ್ತಿರುವುದು ಪ್ರಮುಖ ಕಾರಣವಾಗಿದೆ. ಇದರಿಂದ ಹವಾಮಾನ ಬದಲಾವಣೆ ಉಂಟಾಗಿ ಪ್ರವಾಹ, ಬರ ಉಷ್ಣ ಅಲೆಗಳು ,ಹಿಮ ನದಿಗಳ ಕರಗುವಿಕೆ ಹಾಗೂ ಸಮುದ್ರಮಟ್ಟ ಏರಿಕೆ ಮೊದಲಾದ ಸಮಸ್ಯೆಗಳು ಎದುರಾಗುತ್ತಿವೆ. ಹೆಚ್ಚು ಮರಗಳನ್ನು ಬೆಳೆಸುವುದರಿಂದ ಹಾಗೂ ಪರಿಸರಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯ ರಮೇಶ್ ಕೋಟ್ಯಾಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ