ಲೇಖನಗಳು

ಕುಲವನ್ನು ಧಿಕ್ಕರಿಸಿದ ಕನಕ

ಕುಲವನ್ನು ಧಿಕ್ಕರಿಸಿದ ಕನಕ


“ಕುಲ ಕುಲ ಎಂದು ಹೊಡೆದಾಡದಿರಿ  

ನಿಮ್ಮ ಕುಲದ ನೆಲೆಯನ್ನಾದರೂ ಬಲ್ಲಿರಾ''  

ಸಾಮಾಜಿಕ ಅಸಮಾನತೆಯ ಜಾತಿ ತಾರತಮ್ಯ ವ್ಯವಸ್ಥೆಯ "ರುದ್ದ ಬಂಡೆದ್ದ ಸಾಮಾಜಿಕ ಸಮಾನತೆಯ ತುಡಿದ ಕನಕದಾಸರು ಈ ಸಮಾಜ ಕಂಡ ಶ್ರೇಷ್ಠ ದರ್ಶನಿಕರು. ಭಕ್ತಿ ಶ್ರೇಷ್ಠರಾದ ಕನಕದಾಸರ ಜಯಂತಿಯನ್ನು ನಾಡಿನಾದ್ಯಂತ ಇಂದು ಶ್ರದ್ದಾಪೂರ್ವಕವಾಗಿ ಆಚರಿಸಲಾಗುತ್ತಿದೆ.  

ಹಲವು ದಾರ್ಶನಿಕರಿಗೆ ಜನ್ಮ ನೀಡಿದ ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವ ತಾಲೂಕಿನ ಬಾಡದ ಸಾಮಂತ ದೊರೆಯಾದ ಬೀರ​‍್ಪ ನಾಯಕ ಮತ್ತು ಬಚ್ಚಮ್ಮ ದಂಪತಿಗಳ ಮಗನಾಗಿ ಕ್ರಿ.ಶ.1508ರಲ್ಲಿ ಕನಕದಾಸರು ಜನಿಸಿದರು. ಇವರ ಮೂಲ ಹೆಸರು ತಿಮ್ಮಪ್ಪ ನಾಯಕ.. 

ತಂದೆಯ ಮರಣದ ನಂತರ ತಿಮ್ಮಪ್ಪನೇ ಸೇನಾಧಿಪತಿಯಾಗಬೇಕಾುತು. "ಗಿರುವಾಗ "ಜಯನಗರದ ಅರಸರ ಪರವಾಗಿ ಯುದ್ಧವೊಂದರಲ್ಲಿ ಪಾಲ್ಗೊಳ್ಳಬೇಕಾದ ಸಂದರ್ಭ ಬಂತು, ಆ ಯುದ್ಧದಲ್ಲಿ ತಿಮ್ಮಪ್ಪ ನಾಯಕನು ತನ್ನ ಬಂಧು ಬಳಗ, ಅಪಾರ ಸೈನಿಕರನ್ನು ಕಳೆದುಕೊಂಡು ಆಶ್ಚರ್ಯಕರವಾಗಿ ಬದುಕುಳಿದರು. ಶೋಕದಲ್ಲಿರುವಾಗ ಅವರಿಗೆ ಅಶರೀರವಾಣಿಯೊಂದು ನೀನು ದಾಸನಾಗು ಎಂದು ಹೇಳಿದಂತೆ ಭಾಸವಾಗುತ್ತದೆ. ಆ ಕ್ಷಣವೇ ತಿಮ್ಮಪ್ಪನಿಗೆ ಜೀವನದಲ್ಲಿ ವೈರಾಗ್ಯ ಉಂಟಾಗಿ, ಸಾಮ್ರಾಜ್ಯವನ್ನು ತೊರೆದು ತಂಬೂರಿಯನ್ನು ಹೆಗಲಿಗೆ ನೇತುಹಾಕಿಕೊಂಡು, ಕೈಯಲ್ಲಿ ತಾಳವನ್ನು "ಡಿದು ಶ್ರೀಹರಿಯನ್ನು ಸುತಿಸುತ್ತಾ ಲೋಕ ಕಲ್ಯಾಣಕ್ಕೆ ಹೊರಡುತ್ತಾರೆ. 

ಸಮಾಜದ ಅಂಕುಡೊಂಕುಗಳನ್ನು ತಿದ್ದಲು, ಜನರಲ್ಲಿದ್ದ ಮೌಢ್ಯವನ್ನು ನಿವಾರಣೆ ಮಾಡುವ ಸಲುವಾಗಿಯೇ ತಮ್ಮ ಸಾ"ತ್ಯದ ""ಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳನ್ನು ರಚಿಸುತ್ತಾ ಜನರಲ್ಲಿ ಕನಕದಾಸರು ಅದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. 

ಸಾಮಾಜಿಕ ಮೌಢ್ಯವನ್ನು ನಿವಾರಣೆಯ ಜೊತೆಗೆ ಜಾತಿ, ವರ್ಗ, ಲಿಂಗ ಭೇದವನ್ನು ದಾಟಿ ಸಮಾಜಿಕ ಸಮಾನತೆಯ ಬೀಜವನ್ನು ಬಿತ್ತುವ ಮೂಲಕ ಜನರನ್ನು ಜಾಗೃತಿ ಮೂಡಿಸಲು ಕಿರ್ತನೆಗಳನ್ನು ಮಾಧ್ಯಮವನ್ನಾಗಿಸಿಕೊಂಡು ಊರಾರು ಸುತ್ತಾತ್ತರೆ. ಅವರು ರಚಿಸಿದ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಹಾಗೂ ಸರ್ವಕಾಲಿಕವಾಗಿ.  "ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರು ಬಲ್ಲಿರಾ? ಎಂದು ಅವರು ಜಾತಿ ತಾರತಮ್ಯದ "ರುದ್ಧ ರಚಿಸಿದ ಕೀರ್ತನೆಯು ಜನ ಮಾನಸದಲ್ಲಿ ಇಂದಿಗೂ ಉಳಿದಿದೆ. ಇಂತಹ ನೂರಾರು ಕೀರ್ತನೆಗಳು ಮನೆಮಾತಾಗಿವೆ.  

ಕಾಗಿನೆಲೆ ಆದಿಕೇಶನನ್ನು ಸ್ಥಾುಯಾಗಿಸಿಕೊಂಡು ಸಮಾನತೆಯ ನೆಲೆಯಲ್ಲಿ ಸಮ ಸಮ ಸಮಾಜದ ತಾತ್ವಿಕ ಆಶೆಯಗಳೊಂದಿಗೆ ಕನಕದಾಸರ ರಚಿತ ರಾಮಧಾನ್ಯ ಚರಿತೆ, ನಳಚರಿತ್ರೆ, ಮೋಹನತರಂಗಿಣಿ ಹಲವು ಕೃತಿಗಳನ್ನು ಈ ಸಮಾಜಕ್ಕೆ ನೀಡಿದ್ದಾರೆ. 

ಕನಕದಾಸರು ಯಾವುದೋ ಒಂದು ಜಾತಿಗೆ ಮಾತ್ರ ಸೀ"ುತರಾದವರಲ್ಲಿ ಯಾವುದೇ ಮತಕ್ಕೆ ಕಟ್ಟು ಬೀಳದೆ ಸರ್ವಮತಗಳ ಒಳಿತನ್ನು ಬಯಸಿದವರು. ಕನಕದಾಸರು ಸಾ"ತ್ಯದ ""ಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾ"ತ್ಯ ಲೋಕಕ್ಕೆ ಅರ​‍್ಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ.  

ಮೋಹನತರಂಗಿಣಿ: ಮೋಹನತರಂಗಿಣಿಯಲ್ಲಿ ಕನಕದಾಸರು ಕೃ?್ಣಚರಿತ್ರೆಯನ್ನು ಹೇಳುತ್ತಾ ಕೃ?್ಣದೇವರಾಯನನ್ನೇ ಕೃ?್ಣನಿಗೆ ಹೋಲಿಸುತ್ತಾರೆ. ಮೋಹನತರಂಗಿಣಿ ಅಥವಾ ಕೃ?್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳುನ್ನು ಒಳಗೊಂಡಿದೆ. ಹರಿ-ಹರರನ್ನು ಸಮನ್ವಯಗೊಳಿಸಿದ ಮತ ಸ"ಷ್ಣುತೆ ಈ ಕಾವ್ಯದ "ಶೇಷವಾಗಿದೆ. 

ನಳಚರಿತೆ: ಪೌರಾಣಿಕ ಪಾತ್ರಗಳಿಗೆ ಮಾನ"ಯ ಸ್ಪರ್ಶ ನೀಡಿರುವುದು ಈ ಕಾವ್ಯದ ವೈಶಿಷ್ಟ್ಯ. ಇದು ದಮಯಂತಿಯ ಸಂಘರ್ಷಮಯ ಪ್ರೇಮತ್ಯಾಗಗಳ ಇದರಲ್ಲಿ ಕಾಣಬಹುದು. 

ರಾಮಧಾನ್ಯಚರಿತೆ: ಸಮಾಜದ ವರ್ಗ ವೈಷಮ್ಯದ ಪರಿಣಾಮಗಳನ್ನು ರಾಗಿ ಭತ್ತಗಳ ಮೂಲಕ ಹೇಳುವ "ನೂತವಾದ ತಳ ಸಮುದಾಯಗಳ ಆತ್ಮಾಭಿಮಾನವನ್ನು ಸಾಕ್ಷೀಕರಿಸಿ, ದನಿ ಇಲ್ಲದವರಿಗೆ ಘನತೆ ಇದೆಯೆಂದು ತೋರಿಸಿಕೊಟ್ಟಿರುವುದು ಇದರಲ್ಲಿ ನೋಡಬಹುದು. 

ಹರಿಭಕ್ತಿಸಾರ: ಭಾ"ುನೀ ?ಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕ" ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದದ್ದವು. 

ಕೀರ್ತನೆಗಳು: ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕೀರ್ತನೆಗಳ ಮೂಲಕ ಕನಕದಾಸರು ಡಾಂಭಿಕತೆಯನ್ನು ಕಟುವಾಗಿ ಖಂಡಿಸಿದರು. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ‘ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ' ಎಂದು ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ "ಂಗಿತು' ಎಂಬ ಧನ್ಯತಾಭಾವ. ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ ಎಂದು ಕರೆದುಕೊಂಡಿದ್ದ. 

ಉಗಾಭೋಗ: ಇದು ಸಂಗೀತ ಶಾಸ್ತ್ರದಲ್ಲಿ ಬರುವ ಒಂದು ಪ್ರಕಾರವಾಗಿದ್ದು, ಉಗಾಭೋಗದ ಕೃತಿಗಳಲ್ಲಿ ನಾಲ್ಕು ಸಾಲಿನಿಂದ ಹನ್ನೆರಡು ಸಾಲುಗಳನ್ನು ಒಳಗೊಂಡಿರುತ್ತದೆ. ಪುರಂದರದಾಸರು, ಕನಕದಾಸರು, "ಗೆ ಹಲವು ದಾಸವರೇಣ್ಯರು ಉಗಾಭೋಗಗಳನ್ನು ರಚಿಸಿದ್ದಾರೆ. ಉಗಾಭೋಗಳಲ್ಲಿ ಭಕ್ತಿ, ನೈತಿಕತೆ, ಧರ್ಮ, ನೀತಿ, ಹರಿನಾಮ ಸ್ಮರಣೆ "ಗೆ ಹಲವು "?ಯಗಳ ಬಗ್ಗೆ ಚರ್ಚಿಸಿರುವುದನ್ನು ನಾವು ಕಾಣಬಹುದಾಗಿದೆ. 

ಮುಂಡಿಗೆ: ಮುಂಡಿಗೆ ಎಂದರೆ ತೊಲೆ ಅಥವಾ ಮರದ ದಿ"್ಮು ಎಂಬುದಾಗಿದೆ. ಕನಕರ ಕೆಲವೊಂದು ಹಾಡುಗಳನ್ನು ಸುಲಭವಾಗಿ ಅರ್ಥೈಸಲು ಸಾಧ್ಯ"ಲ್ಲವೆಂದೇ ಇವುಗಳಿಗೆ ಮುಂಡಿಗೆಗಳು ಎಂದು ಕರೆದಿರಬಹುದು. "ಗೆ ಹಲವು "ದ್ವಾಂಸರು ಹಲವಾರು ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. 

ಜಾತಿ ಕುಲಗಳ ಕಚ್ಛಾಟದಿಂದ ದೂರ ಉಳಿಯುವುದೆ ಕನಕರಿಗೆ ನಾವು ನೀಡುವ ನಿಜವಾದ “ಕನಕ''.  ಸಮ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರ"ುಸಿದ ಭಕ್ತ ಶ್ರೇಷ್ಠ ಕನಕದಾಸರ ಆದರ್ಶಗಳು ನಮ್ಮೊಂದಿಗೆ ಜೀವಂತವಾಗಿ ಇರಿಸಿಕೊಳ್ಳುವ ಸಂಕ್ಪಲದೊಂದಿಗೆ ಕನಕದಾಸರ ಜಯಂತಿಯನ್ನು ಆಚರಿಸೋಣ.... 

                                                                     ಕುಸುಮಾ.ಎಸ್‌.ಗೌಡ್ರ 

ಪ್ರಶಿಕ್ಷಣಾರ್ಥಿ  

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾವೇರಿ. 


ಸುದ್ದಿ ಓದಿ