ಭಾರತ ಗೌರವ ರಾಷ್ಟ್ರ ಪ್ರಶಸ್ತಿಗೆ ಕಾಮಗೊಂಡ ಆಯ್ಕೆ
ಇಂಡಿ 10: ಜನ್ಮಭೂಮಿ ಫೌಂಡೇಶನ್ (ರಿ) ಬೆಂಗಳೂರು ಅವರು ಕೊಡಮಾಡುವ “ಭಾರತ ಗೌರವ ರಾಷ್ಟ್ರ ಪ್ರಶಸ್ತಿಗೆ” ಇಂಡಿ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿಯ ಗೌರವಾಧ್ಯಕ್ಷ ಮಂಜುನಾಥ ಜಿ. ಕಾಮಗೊಂಡ ಆಯ್ಕೆಯಾಗಿದ್ದಾರೆ.
ಜ. 2ರಂದು ಗೋವಾದ ಪಣಜಿ ನಗರದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ಸಹಕಾರ ಕ್ಷೇತ್ರದಲ್ಲಿ ಕಾಮಗೊಂಡ ಅವರು ಮಾಡಿರುವ ಸೇವೆಯನ್ನು ಹಲವು ಮೂಲಗಳಿಂದ ಸಂಸ್ಥೆ ಗುರುತಿಸಿ ಹಾಗೂ ಜನಪರ ಕಾರ್ಯಗಳನ್ನು ಮೆಚ್ಚಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಚಾಲಕ ಎಸ್.ಎಸ್. ಧೂಳಶೆಟ್ಟಿ ತಿಳಿಸಿದ್ದಾರೆ.